ಸಾಂಸ್ಕೃತಿಕ ಭವನದ ಕಾಮಗಾರಿ ಭೂಮಿ ಪೂಜೆ
e ಸುದ್ದಿ ಲಿಂಗಸುಗೂರು
ಸಾಂಸ್ಕೃತಿಕ ಭವನದ ಕಾಮಗಾರಿ ಭೂಮಿ ಪೂಜೆ*. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ( ರಿ ) ಕಲಬುರ್ಗಿ ಇವರ ಅನುದಾನದಲ್ಲಿ ಲಿಂಗಸುಗೂರು ಪಟ್ಟಣದ ಕಲಬುರ್ಗಿ ಮುಖ್ಯ ರಸ್ತೆಯ ಹೊರವಲಯದಲ್ಲಿರುವ ಇರುವ ಮಾತೆ ಮಾಣಿಕೇಶ್ವರಿ ಮಠದಲ್ಲಿ ಸಾಂಸ್ಕೃತಿಕ ಭವನ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ನೆರವೆರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಮತಿ ಲಿಲಾ ಮಲ್ಲಿಕಾರ್ಜುನ ಮಾತನಾಡಿ ಶ್ರೀ ಯುತ ಬಸವರಾಜ ಪಾಟೀಲ್ ಸೇಡಂ ಅಪ್ಪಾಜಿಯವರು ಆಶಯದಂತೆ ನಮ್ಮ ಕಲ್ಯಾಣ ಕರ್ನಾಟಕ ಭಾಗ ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಲಾಗುತ್ತದೆ.ಲಾಲ್ ಬಹುದ್ದರ್ ಶಾಸ್ತ್ರಿಯವರಂತೆ ಪಾಟೀಲ್ ಜಿ ಯವರು ಕೂಡಾ ಸಮೃದ್ಧ ಬೆಳವಣಿಗೆಗೆ ಅವಿರತವಾಗಿ ಶ್ರಮಿಸುತ್ತಿರುವ ಮಹಾನ್ ಶಕ್ತಿ ಎಂದು ಹೇಳಿದರು.ಇನ್ನೊರ್ವ ನಿರ್ದೆಶಕರಾದ ಈರೇಶ
ಇಲ್ಲೂರು ಮಾತನಾಡಿ ಬಸವರಾಜ ಪಾಟೀಲ್ ಸೇಡಂ ಅವರ ಆದರ್ಶದಂತೆ ಸರ್ಕಾರದ ಹಲವಾರು ಜವಾಬ್ದಾರಿಗಳನ್ನು ಸಂಘದ ವತಿಯಿಂದ ನಾವೆಲ್ಲರೂ ಸೇವಾ ಮನೊ ಭಾವನೆಯಿಂದ ಕೇಲಸ ಮಾಡಿದಾಗ ಮಾತ್ರ ನಿರಿಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತೆ ಮಾಣಿಕ್ಯೆಶ್ವರಿ ಮಠದ ಮಾತ ನಂದಿಶ್ವರಿ ಅಮ್ಮನವರು ನಿರ್ದೆಶಕರಾದ ಶ್ರೀಮತಿ ಲೀಲಾ ಮಲ್ಲಿಕಾರ್ಜುನ ಕಾರಟಗಿಯವರು ಹಾಗೂ ಶ್ರೀ ಈರೇಶ ಇಲ್ಲುರು ಹಾಗೂ ವಿಕಾಸ ಅಕಾಡೆಮಿ ಸಂಚಾಲಕರಾದ ಶ್ರೀ ವೀರೇಶ ಸೌದ್ರಿ ಹಾಗೂ ಗ್ರಾಮ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸೂಗುರಯ್ಯ ಸ್ವಾಮಿ ಹಾಗೂ ಕ್ಯಾಶುಟಿಕ್ ನಿರ್ಮಿತ ಕೇಂದ್ರದ ಇಂಜಿನಿಯರ್ ತಿಮ್ಮಣ್ಣ ಪುರಸಭೆಯ ನಾಮನಿರ್ದೇಶಿತ ಸದಸ್ಯರಾದ ಚನ್ನಬಸವ ಹಿರೇಮಠ, ತಾಲೂಕು ಸಂಯೋಜಕರು ಸೇರಿದಂತೆ ಮಠದ ರವಿಂದ್ರ ಜಾದವ್ ಗೊ ಶಾಲೆಯ ಮುಖ್ಯಸ್ಥರಾದ ಅಮಿತ್,ಸೋಮು ನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.