ಬಾರದು ಈ ಸಮಯ – ಮತ್ತೊಮ್ಮೆ ಬಾರದು ಈ ಸಮಯ
ಒಳಗೊಳಗೆ (ಮನೆ-ಮನದೊಳಗೆ)ಆಗು ಋಷಿ,
ನಿನ್ನೊಳಗೆ ಕಂಪಿಸಿ, ನಿನ್ನವರಿಗೆ ತಂಪಿಸಿ.
ನಿನ್ನರನ್ನು ಸಂಧಿಸಿ – ಸ್ಪಂದಿಸಿ.
ಗಳಿಸು – ಬೆಳೆಸು ಬಂಧ.
ಕಳೆದುಕೊ, ಪಡೆದುಕೊ ಮರಳಿ ಬಾರದು ಸಮಯ
ನಿನ್ನ ನೀನು ತಿಳಿದು-ಅಳಿದು ಬಾಳು
ನಿನ್ನ ನೀ ಅರಿತರೆ, ಜಗವೇ ನಿನ್ನದೇ ನೋಡು
ಮತ್ತೊಮ್ಮೆ ಬಾರದು ಈ ಸಮಯ
ನಾಯಕನಾಗು ಭೀಗಬೇಡ, ನಾಗರೀಕತೆ ಮರೀಬೇಡ
ಹೆಮ್ಮರವಾಗು; ನೆರಳು ಆಸರೆ ಆಗು.
ಮತ್ತೆ ಬಂದೀತೆ ಸಮಯ!!
ಇರುವುದೆಲ್ಲವ ಬಿಟ್ಟು, ಪಯಣ ಮುನ್ನಡಿಸು
ಸಮಯದ ಗೊಂಬೆ ಆಗು
ಜಗತ್ತಿಗೆ ನಂದ ದೀಪವಾಗು.
ನಿಲುಕದಿರು – ಸಿಲುಕದಿರು
ಆ ರವಿಯು ಮರೆಯಾದರೂ ಬೆಳದಿಂಗಳುಂಟು
ಅರಿತವರಾರು ಸಮಯದ ನಂಟು.
ಸಮಯದಾಟಕ್ಕೆ ಕಟ್ಟುವೇ ಮೂಟೆ ಘಂಟು.
ಪಯಣ ಮುಗಿದರೂ, ಅಳಿಸದಿರಲೀ ಗುರುತು
ಸಮಯ ಸಾಗಿದರು, ಚೆಲ್ಲುತಿರಲೀ ಬೆಳಕು.
ಬಾರದು ಈ ಸಮಯ – ಮತ್ತೊಮ್ಮೆ ಬಾರದು ಈ ಸಮಯ
–ಸುರಗ aka ರಾಘು
—————————————————————————
ದಿನದ ೨೪ ಗಂಟೆ ರೋಗಿಗಳ ಸೇವೆಗಾಗಿ ಸದಾ ಸಿದ್ದ. ಅವಶ್ಯಕತೆ ಇದ್ದವರು ಸಂಪರ್ಕಿಸಿ
ಮಲ್ಲಿಕಾರ್ಜುನ-9663223126
Nice…