ಗ್ರಾಮದೊಳಗೆ ನುಗ್ಗಿದ ಕಾಲುವೆ ನೀರು
e-ಸುದ್ದಿ, ಲಿಂಗಸುಗೂರು
ಕೆ.ಬಿ. ಜೆ.ಎನ್.ಎಲ್ ಅಧಿಕಾರಿಗಳ ನಿರ್ಲಕ್ಷದಿಂದಾಗಿ ರಾಂಪುರು ಏತ ನೀರಾವರಿ ಕಾಲುವೆಯ ನೀರು ಲಿಂಗಸುಗೂರು ತಾಲೂಕಿನ ಕಾಳಾಪೂರು ಗ್ರಾಮ ಪಂಚಾಯತ ವ್ಯಾಪ್ತಿಯ ಐದನಾಳ ಗ್ರಾಮಕ್ಕೆ ಮತ್ತೆ ನುಗ್ಗಿವೆ.
ಐದನಾಳ ಗ್ರಾಮಕ್ಕೆ ಕಾಲುವೆ ನೀರು ನುಗಿದ ಕುರಿತು ಸ್ವಲ್ಪ ದಿನಗಳ ಹಿಂದೆ ವರದಿ ಪ್ರಸಾರ ಮಾಡಲಾಗಿತ್ತು, ಆದರು ಕೂಡಾ ಕಂಡರೂ ಕಾಣದಂತಿರುವದು ವಿಪರ್ಯಾಸ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆ. ಬಿ .ಜೆ. ಎನ್. ಎಲ್. ಅಧಿಕಾರಿ ಅಸಿಸ್ಟೆಂಟ್ ಇಂಜಿನಿಯರಾದ ನಾಗೇಶ ಈ ಹಿಂದೆ ತಾತ್ಕಾಲಿಕ ಮರಂ ಹಾಕಿದ್ದರು ಅದು ಸರಿಯಾಗಿ ಕೆಲಸ ಮಾಡದ್ದರಿಂದ ಮತ್ತೆ ಐದನಾಳ ಗ್ರಾಮಕ್ಕೆ ನೀರು ಬಂದಿದೆ.
ರಾಂಪುರು ಏತ ನೀರಾವರಿಯ ಕಾಲುವೆ ಚಿಕ್ಕಾದಾಗಿದ್ದು ಕಾಲುವೆ ತುಂಬೆಲ್ಲಾ ಜಾಲಿ ಬೆಳೆದು ನಿಂತಿದೆ ಹಾಗೂ ಹೂಳು ಮಣ್ಣು ಕೂಡ ತುಂಬಿದೆ ಈ ಕುರಿತು ಅನೇಕ ಬಾರಿ
ಕೆ ಬಿ ಜೆ ಎನ್ ಎಲ್ ಅಧಿಕಾರಿಗಳಿಗೆ ಜಂಗಲ್ ಕಟಿಂಗ್ ಹಾಗೂ ಮಣ್ಣು ತೆಗೆಯುವಂತೆ ರೈತರು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪದ ಮಾತುಗಳು ಕೇಳಿ ಬರುತ್ತಿದೆ.
ಅಧಿಕಾರಿಗಳು ಈಗ ರಾಂಪುರ ಏತ ನೀರಾವರಿಯ ಕಾಲುವೆ ಸರಿಯಾಗಿ ನಿರ್ವಹಣೆ ಮಾಡದೇ ಈ ಭಾಗದ ರೈತರಿಗೆ ಮೀನಮೇಷ ಮಾಡುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಕಾಳಾಪುರು ಗ್ರಾಮ ಪಂಚಾಯತ ವ್ಯಾಪ್ತಿಯ ಐದನಾಳ ಗ್ರಾಮಕ್ಕೆ ನೀರು ನುಗ್ಗುತ್ತಿರುವುದು ಎರಡನೇ ಬಾರಿಯಾಗಿದ್ದು ಸಾರ್ವಜನಿಕರು ಮತ್ತು ರೈತಾಪಿ ವರ್ಗ ರೊಸಿಹೋಗಿದ್ದಾರೆ.
ನೀರು ಗ್ರಾಮಕ್ಕೆ ನುಗಿದ್ದರಿಂದ ರಸ್ತೆ ಮೇಲೆ ಹರಿಯುವರಿಂದ ಚಿಕ್ಕ ಮಕ್ಕಳಿಗೂ ಮತ್ತು ವಯಸ್ಸಾದಂತೆ ಹಿರಿಯರಿಗೂ ಸಂಚಾರ ಮಾಡಲು ತುಂಬಾ ತೊಂದರೆಯಾಗಿದೆ. ರಾಂಪುರು ಏತ ನೀರಾವರಿಯ ನೀರು ಪೋಲಾಗಲು ಕಾಣೀಭೂತರಾದ ಸಂಭಂದಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕೆ.ಬಿ.ಜೆ .ಎನ್.ಎಲ್. ನ ಕಛೇರಿಯ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಐದನಾಳ ಗ್ರಾಮಸ್ಥರ ಒತ್ತಾಯಿದ್ದದಾರೆ.