ಗಜಲ್
ಭೀಮನ ಅಮಾವಾಸ್ಯೆ ಮಧುರವಾಗಿದೆ ನಿನ್ನಿಂದ
ಮನದಲ್ಲಿ ಪ್ರೀತಿಯು ಜೀವಂತವಾಗಿದೆ ನಿನ್ನಿಂದ
ತರ್ಲೆ ತುಂಟಾಟಗಳು ಮಾಗಿ ಫಲವ ನೀಡುತ್ತಿವೆ
ಪ್ರೇಮದ ರಸಬುಗ್ಗೆಯು ಅಕ್ಷಯವಾಗಿದೆ ನಿನ್ನಿಂದ
ಏಳೇ ಜನುಮಕ್ಕೆ ನೀನು ಸಾಕೆಂದು ಹೇಗೆ ಹೇಳಲಿ
ಜನ್ಮಾಂತರದ ಲೆಕ್ಕವೆಲ್ಲ ನೀರಸವಾಗಿದೆ ನಿನ್ನಿಂದ
ಉಬ್ಬು ತಗ್ಗುಗಳು ಬೇಕಾಗಿಲ್ಲ ಸಮತಟ್ಟ ಬಾಳಿಗೆ
ಹೃದಯಗಳ ಸಂಮ್ಮಿಲನವು ಹಿತವಾಗಿದೆ ನಿನ್ನಿಂದ
ಒಲವಿನ ಫಸಲು ಹಚ್ಚ ಹಸುರಾಗಿದೆ ನನ್ನೆದೆಯಲ್ಲಿ
‘ಮಲ್ಲಿ’ಯ ಬರಡು ಬಾಳು ಸುಂದರವಾಗಿದೆ ನಿನ್ನಿಂದ
-✍️ರತ್ನರಾಯಮಲ್ಲ