ಅಜಾತಶತ್ರು ವಾಜಪೇಯಿ ಮತ್ತು ರಾಮಕೃಷ್ಣ ಪರಮಹಂಸರ ಪುಣ್ಯ ಸ್ಮರಣೆ
e-ಸುದ್ದಿ, ಮಸ್ಕಿ
ಮಸ್ಕಿ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ರಾಷ್ಟ್ರ ರಾಜಕಾರಣದ ಅಜಾತಶತ್ರು, ಕವಿಹೃದಯಿ, ಪ್ರಧಾನಮಂತ್ರಿಯಾಗಿ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಮಹಾನ್ ನಾಯಕ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮೃತಿ ದಿನದಂದು ಗೌರವ ನಮನ ಕಾರ್ಯಕ್ರಮ ಜರುಗಿತು.
ಹಾಗೂ ಸ್ವಾಮಿ ವಿವೇಕಾನಂದರ ಅಧ್ಯಾತ್ಮ ಗುರುಗಳು, ಶ್ರೇಷ್ಠ ಸಂತ ಶ್ರೀ ರಾಮಕೃಷ್ಣ ಪರಮಹಂಸ ಅವರ ಪುಣ್ಯಸ್ಮರಣೆಯಂದು ಶತ ಶತ ಪ್ರರಸಾರ ಮಗಳನ್ನುು ಅರ್ಪಿಸಲಾಯಿತು.
ಬಿಜೆಪಿ ಹಿರಿಯ ಮುಖಂಡರಾದ ಶ್ರೀ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾದ ಅಪ್ಪಾಜಿ ಗೌಡ ಪಾಟೀಲ್ ಹಾಗೂ ಮಸ್ಕಿಬಿಜೆಪಿಯ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ ಬಿಜೆಪಿ ಹಿರಿಯ ಮುಖಂಡರಾದ ಅಮರೇಶ್ ಅಡವಿಬಾವಿ ತಾಂಡಾ ಯಲ್ಲೋಜಿರಾವ್ ಕೋರೆಕರ್ ಅಮರೇಗೌಡ ಪಾಟೀಲ್ ಶರಣಯ್ಯ ಗುಡುದುಾರು ದೇವಣ್ಣ ನಾಯಕ್ ಅಂಬರೀಷ್ ಮಾಟೂರ್ ಆಂಜನೇಯ ಜಿರಾಲ್ ಶಿವರಡ್ಡಿ ಅಚ್ಚ ಮಲ್ಲಿಕಾರ್ಜುನ ಅಚ್ಚ ಗಣೇಶ್ ಯಾದವ್ ತಿಮ್ಮಾಪುರ್ ಸುರೇಶ ಪತ್ತಾರ ಭಾಗವಹಿಸಿದ್ದರು.