ಆತ್ಮ ಸಾಂಗತ್ಯ
ಮೌನದ ನಂಟು ಬಿಡಿಸಿದ
ನಗೆಯ ಬುತ್ತಿ ನೀಡಿದ
ಜೀವಸೆಲೆಯ ತೋರಿದ
ಭಾವ ಕಾವ್ಯ ಸಂಗಾತಿ
ನಗುವ ತುಟಿಗಳ ಹಿಂದೆ
ದುಗುಡ ದುಮ್ಮಾನ ಕಂಡೆ
ಸಿಟ್ಟು ಸೆಡವುಗಳ ಕಾರಣ
ಪ್ರೀತಿ ಮಮತೆಗಳೆಂದರಿತೆ
ಮೌನದ ಹಿಂದಿರುವ ಮಾತು
ಭಾವ ಸಂಕೀರ್ಣತೆಯ ಆಳ
ಹಿಂಜರಿಕೆಗಳ ನೆರಳುಗಳರಸಿ
ಕಣ್ಣಿನ ಆಳದಲ್ಲಿಳಿದು ಹುಡುಕಿ
ಹೃದಯದಾಳದ ಕಪ್ಪೆ ಚಿಪ್ಪಿನಲ್ಲಿ
ನಾನರಿಯದ ನನ್ನ ಹುಡುಕಿ
ಭರವಸೆಯ ದೀಪ ಬೆಳಗಿ
ಭಾವ ತೆಪ್ಪದಲ್ಲಿ ಮೇಲೆರಿಸಿದೆ
ಯಾವ ಜನುಮದ ನಂಟು
ಅರಿಯದ ಭಾವ ಬೆಸುಗೆ
ನಡೆಸುತಿದೆ ನನ್ನ ನಿನ್ನ
ಆತ್ಮ ಸಂಗಾತ್ಯದೆಡಗೆ
-ಪ್ರೊ. ರಾಜನಂದಾ ಘಾರ್ಗಿ
ಬೆಳಗಾವಿ