ಸೈನಿಕರು ಹಾಗೂ ಆರಕ್ಷಕರ ಕಾರ್ಯ ಅನನ್ಯ

ಸೈನಿಕರು ಹಾಗೂ ಆರಕ್ಷಕರ ಕಾರ್ಯ ಅನನ್ಯ

e-ಸುದ್ದಿ ಬೆಳಗಾವಿ

ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಸೈನಿಕರು ಹಾಗೂ ಆರಕ್ಷಕರ ಪಾತ್ರ ಅಮೂಲ್ಯವಾದುದು. ಸೈನಿಕರು ದೇಶದ ಗಡಿಯಲ್ಲಿ ಹೋರಾಡುವ ಮೂಲಕ ದೇಶರಕ್ಷಣೆ ಮಾಡುತ್ತಾರೆ.ಅದೇ ರೀತಿ ಪೋಲಿಸರು ಆಂತರಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಸಾರ್ವಜನಿಕರಿಗೆ ಸಹಕಾರಿಯಾಗಿದ್ದಾರೆ ಎಂದು ಹೈದರಾಬಾದಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೆಶಕ ವಿಶ್ವನಾಥ ಸಿ. ಸಜ್ಜನರ್ ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯದ ಅಮೃತಹೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲಾ ಸಿರಿಗನ್ನಡ ಮಹಿಳಾವೇದಿಕೆ,  ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳ ಸಹಯೋಗದಲ್ಲಿ ನಡೆದ ರಾಷ್ಟ್ರಮಟ್ಟದ ಗುಗಲ್‌ಮೀಟ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಳೆದ ಒಂದೂವರೆ ವರ್ಷದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ಪೋಲಿಸ್ ಇಲಾಖೆ ಅಹರ್ನಿಶಿ ದುಡಿಯುತ್ತಿದ್ದು, ಜನರ ಸಹಕಾರ ಅತೀ ಅಗತ್ಯ ಎಂದು ಹೇಳಿದರು.

ಅಂತರಾಷ್ಟ್ರೀಯ ದೇಹದಾಡ್ಯ ತರಬೇತುದಾರ ಎ.ವಿ.ಆರ್. ರವಿ ಮಾತನಾಡಿ ಯುವಕರು ಕ್ರೀಡಾಕ್ಷೇತ್ರದಲ್ಲಿ ಆಸಕ್ತಿ ತೋರಬೇಕಿದ್ದು ಮುಂಬರುವ ದಿನಗಳಲ್ಲಿ ದೇಶದಲ್ಲಿ ಕ್ರೀಡಾ ವಲಯದಲ್ಲಿ ಅಪೂರ್ವ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ವಿಂಗ್ ಕಮಾಂಡರ್ ಪಿ. ರಮೇಶ ಭಟ್, ದೇಶ ಸ್ವತಂತ್ರಗೊಳ್ಳಲು ಸಹಸ್ರಾರು ದೇಶಭಕ್ತರು ಪ್ರಾಣಾರ್ಪಣೆ ಮಾಡಿದ್ದಾರೆ. ದೇಶದ ಇತಿಹಾಸವನ್ನು ಅರಿಯುವುದು ಇಂದಿನ ಅಗತ್ಯವಾಗಿದೆ ಎಂದರು.

ಸುಬೇದಾರ ಚಂದ್ರಶೇಖರಯ್ಯ ವಿ. ಸವಡಿಯವರು ಕಾರ್ಗಿಲ್ ಯುದ್ಧದ ರೋಚಕ ಕ್ಷಣಗಳನ್ನು ಹಂಚಿಕೊಂಡಿದ್ದು ಕೇಳುಗರನ್ನು ಭಾವಪರವಶರನ್ನಾಗಿಸಿತು.

ಪ್ರಸ್ತುತ ಸೇನಾಧಿಕಾರಿ ಸಾತ್ವಿಕ ಕುಳಮರ್ವ, ತಾವು ವಿದೇಶದಲ್ಲಿ ಕೈತುಂಬ ಸಂಬಳ ದೊರಕುತ್ತಿದ್ದ ವೃತ್ತಿ ತ್ಯಜಿಸಿ ಭಾರತೀಯ ಸೇನೆಯಲ್ಲಿ ಸೇವೆಗೈಯ್ಯುತ್ತಿರುವುದು ತಮಗೆ ಅತ್ಯಂತ ಸಾರ್ಥಕ ತಂದಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಸಿರಿಗನ್ನಡ ವೇದಿಕೆಯ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ| ಎಂ.ಆರ್. ನಾಗರಾಜರಾವ್, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಹೇಮಾ ಸೋನಳ್ಳಿ, ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಹಾಗೂ ಶ್ರೀ ವಿ. ಬಿ. ಕುಳಮರ್ವ ಕಾರ್ಯಕ್ರಮಕ್ಕೆ ಶುಭಾಶಯ ಕೋರಿ ಮಾತನಾಡಿದರು.

ಕು. ಪೂರ್ವಿ ಶೆಟ್ಟಿ, ಕು. ಸಿಂಧೂರಾ ಬರಲಾಮಿ ಹಾಗೂ ಸಂಗಡಿಗರು ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು. ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಜಯಾ ಚುನಮರಿ ಆಶಯ ನುಡಿಗಳನ್ನಾಡಿದರು. ಡಾ. ಎಂ.ಜಿ. ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.

ಡಾ. ಶೀಲಾದಾಸ ಸ್ವಾಗತಿಸಿದರು. ಶ್ರೀ ಆರ್.ಎಲ್. ಮಿರ್ಜಿ ನಿರೂಪಿಸಿದರು. ಸಿರಿಗನ್ನಡ ವೇದಿಕೆಯ ಜಿಲ್ಲಾ ಅಧ್ಯಕ್ಷ ಚೇನತ ಜೋಗನ್ನವರ ವಂದಿಸಿದರು.

ವರದಿ – ಶ್ರೀಮತಿ ಜಯಾ ಚುನಮರಿ

Don`t copy text!