ಕುಂಬಳಕಾಯಿ ಎಲೆ ಪಲ್ಯ..
ಕುಂಬಳ ಎಳೆ ಕುಡಿಯನ್ನು ನಾರು ತೆಗೆದು ಸಣ್ಣಗೆ ಹೆಚ್ಚಿ ನೀರಲ್ಲಿ ತೊಳೆದು ಇಟ್ಟುಕೊಳ್ಳಬೇಕು. ಹಸಿಮೆಣಸಿನಕಾಯಿ ಬಳ್ಳೊಳ್ಳಿ ಜೀರಿಗೆ ಕುಟ್ಟಿ ಇಟ್ಟುಕೊಬೇಕು. ಲಭ್ಯವಿದ್ದರೆ ಹೆಚ್ಚಿದ ಕುಂಬಳಕಾಯಿ ಎಲೆಯ ಅರ್ಧದಷ್ಟು ಸಬ್ಬಸಗಿ ಹೆಚ್ಚಿ ಇಟ್ಟುಕೊಬೇಕು. ಎರಡು ಚಮಚ ಕಡ್ಲಿಬೇಳೆ ನೆನಸಿಟ್ಟುಕೊಬೇಕು ಅಥವಾ ಎರಡು ಚಮಚ ಅಕ್ಕಿಯನ್ನು ನೆನಸಿಟ್ಟುಕೊಬೇಕು ಒಗ್ಗರಣೆಗೆ ಹಸಿಮೆಣಸು ಜೀರಿಗೆ ಬಳ್ಳೊಳ್ಳಿ ಪೆಸ್ಟ ಹಾಕಿ ತಾಳಿಸಬೇಕು ನಂತರ ಈರುಳ್ಳಿ ಹಾಕಿ ತಾಳಿಸಬೇಕು ನಂತರ ನೆನಸಿದ ಅಕ್ಕಿ ಅಥವಾ ಕಡ್ಲಿಬೇಳೆ ಹಾಕಿ ತಾಳಿಸಬೇಕು ನಂತರ ಹೆಚ್ಚಿಟ್ಟುಕೊಂಡ ಕುಂಬಳಕಾಯಿ ಎಲೆ ಮತ್ತು ಸಬ್ಬಸಗಿ ಹಾಕಿ ಅರಿಶಿಣ ಪುಡಿ ಉಪ್ಪು ಹಾಕಿ ತಾಳಿಸಬೇಕು ಕೊನೆಯಲ್ಲಿ ತುರಿದ ಹಸಿಕೊಬ್ಬರಿ ಹಾಕಿ ತಾಳಿಸದರಾಯಿತು ರುಚಿ ರುಚಿಯಾದ ಕುಂಬಳಕಾಯಿ ಎಲೆ ಪಲ್ಯ ತಯಾರು. ಬಿಸಿ ಬಿಸಿ ರೊಟ್ಟಿ.. ಚಪಾತಿ.. ಬಿಸಿ ಅನ್ನ ತುಪ್ಪದೊಡನೆ ಸವಿಯಲು ಸಿದ್ಧ.
–ಸರ್ವಮಂಗಳ ಅರಳಿಮಟ್ಟಿ, ಬೆಳಗಾವಿ