ಮಸ್ಕಿ ಪಟ್ಟಣದಲ್ಲಿ ರಸ್ತೆ ಡಿವೈಡರ್ ಅಳವಡಿಕೆಗೆ ಸರ್ವೆ ಕಾರ್ಯ ಆರಂಭ


ಮಸ್ಕಿ ಪಟ್ಟಣದಲ್ಲಿ ರಸ್ತೆ ಡಿವೈಡರ್ ಅಳವಡಿಕೆಗೆ ಸರ್ವೆ ಕಾರ್ಯ ಆರಂಭ

e- ಸುದ್ದಿ, ಮಸ್ಕಿ

ಮಸ್ಕಿ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150 (ಎ) ಯ ಅಶೋಕ ವೃತ್ತದಿಂದ ವಾಲ್ಮೀಕಿ ವೃತ್ತದವರೆಗಿನ ರಸ್ತೆಯನ್ನು ದ್ವಿಪಥ ರಸ್ತೆಯ ಜೊತೆಗೆ ರಸ್ತೆ ವಿಭಜಕ ಮತ್ತು ರಸ್ತೆ ಬದಿ ವಿದ್ಯುತ್ ದೀಪಗಳ ಅಳವಡಿಕೆ ಯೋಜನೆಗೆ ಮತ್ತೆ ಜೀವ ಪಡೆದುಕೊಂಡಿದ್ದು ಬುಧವಾರ ಪುರಸಭೆ ಸಿಬ್ಬಂದಿ ಸರ್ವೇ ಕಾರ್ಯ ನಡೆಸಿದರು.
ರಾಷ್ರ್ರೀಯ ಹೆದ್ದಾರಿ ಪ್ರಾಧಿಕಾರದ ಹುನಗುಂದ ಉಪ ವಿಭಾಗದ  ಅಧಿಕಾರಿಗಳ ಸೂಚನೆ ಮೇರೆಗೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ನೇತೃತ್ವದಲ್ಲಿ ಅಶೋಕ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ರಸ್ತೆ ಸರ್ವೇ ಮಾಡಲಾಯಿತು. ರಸ್ತೆ ಮದ್ಯಭಾಗದಿಂದ ಎರಡು ಕಡೆ 12 ಮೀಟರ್ ವರೆಗೆ ರಸ್ತೆ ಅಗಲೀಕರಣ, ರಸ್ತೆ ವಿಭಜಕ ಹಾಗೂ ಚರಂಡಿ ನಿರ್ಮಾಣ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಸ್ಥಳಾಂತರಗೊಳ್ಳಬೇಕಾದ ಅಂಗಡಿಗಳ, ಚರಂಡಿ, ಪೈಪ್ ಲೈನ್ ಹಾಗೂ ವಿದ್ಯುತ್ ಕಂಬಗಳನ್ನು ಗುರುತು ಮಾಡಲಾಯಿತು.
ಪಟ್ಟಣದಲ್ಲಿ ದ್ವಿಪಥ ರಸ್ತೆ, ರಸ್ತೆ ವಿಭಜಕ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಕುರಿತು ತುರ್ತು ಅಂದಾಜು ಪಟ್ಟಿ ಕಳಿಸುವಂತೆ ಹೆದ್ದಾರಿ ಮುಖ್ಯ ಎಂಜನಿಯರ್ ಅವರು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸರ್ವೇ ನಡೆಸಿ  ವರದಿ ಸಲ್ಲಿಸುವಂತೆ ಪುರಸಭೆ, ಜೆಸ್ಕಾಂ ಹಾಗೂ ದೂರ ಸಂಪರ್ಕ ಇಲಾಖೆ ಪತ್ರ ಬರೆದು ಶೀಘ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಕೋಟ್ 1
ಮಸ್ಕಿ ಪಟ್ಟಣದಲ್ಲಿ ಹಾದು ಹೋಗಿರುವ ೧೫೦ (ಎ) ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ವಿಬಜಕ ಅಳವಡಿಸಲು ಸರ್ವೆ ಮಾಡಿ ವರದಿ ಕೊಡುವಂತೆ ಮಸ್ಕಿ ಪುರಸಭೆ ಅಧಿಕಾರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅಂದಾಜು ಪಟ್ಟಿ ಸಲ್ಲಿಸಲಾಗುವುದು.
ವಿಜಯಕುಮಾರ್ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
————————-_———————-

ಮಸ್ಕಿ ಪಟ್ಟಣದಲ್ಲಿ ಮೊದಲ ಹಂತದಲ್ಲಿ ಅಶೋಕ ವೃತ್ತದಿಂದ ವಾಲ್ಮೀಕಿ ವೃತ್ತದವರೆಗಿನ ಎರಡು ಕಿಮೀ ರಸ್ತೆಯನ್ನು ದ್ವಿಪಥ ರಸ್ತೆಯ ಜೊತೆಗೆ ರಸ್ತೆ ವಿಭಜಕ ಹಾಗೂ ರಸ್ತೆ ಬದಿ ವಿದ್ಯುತ್ ದೀಪಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ಅಂದಾಜು ಪಟ್ಟಿ ಸಿದ್ದಪಡಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಶೀಘ್ರ ಈ ಯೋಜನೆ ಕಾರ್ಯಗತಗೊಳ್ಳಲಿದೆ.
ಬಸನಗೌಡ ತುರ್ವಿಹಾಳ, ಶಾಸಕರು ಮಸ್ಕಿ

 

Don`t copy text!