ನಲಿಕಲಿ ಸೇತುಬಂಧ ವಿಶೇಷ ಕಾರ್ಯಗಾರ
e-ಸುದ್ದಿ ಮಸ್ಕಿ
ಮಸ್ಕಿ :ಮಕ್ಕಳು ನಲಿಯುತ್ತ ಕಲಿಯಲಿ ಎಂಬ ಕಾರಣಕ್ಕೆ ಸರ್ಕಾರ ಜಾರಿಗೊಳಿಸಿರುವ ನಲಿ-ಕಲಿ ಸೇತುಬಂಧ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಪಂಪಾಪತಿ ಚಿರತನಾಳ ಹೇಳಿದರು.
ಮಂಗಳವಾರ ಮಸ್ಕಿ ತಾಲೂಕಿನ ಗುಡದೂರು ವಲಯ ಮಟ್ಟದ ನಲಿ-ಕಲಿ ಶಿಕ್ಷಕರಿಗೆ ಅಜಿಂ ಪ್ರೇಮ್ ಜಿ ಸಹಯೋಗ ದೊಂದಿಗೆ ಸರ್ಕಾರಿ ಪ್ರೌಢಶಾಲೆ ಹಾರಾಪುರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಮತ್ತು ಗಣಿತ ವಿಶೇಷ ನಲಿಕಲಿ ಸೇತುಬಂಧ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜ್ಞಾನ ಪ್ರವೇಶಿಸುವಿಕೆಯ ಹಂತದಲ್ಲಿರುವ ನಲಿಕಲಿ ಮಕ್ಕಳಿಗೆ ಪ್ರತಿಯೊಬ್ಬರೂ ಸಂದರ್ಭಕ್ಕನುಗುಣವಾಗಿ ತಮ್ಮ ಸಹಾಯ ಹಾಗೂ ಪ್ರೇರಣೆಯ ಮೂಲಕ ಜ್ಞಾನವನ್ನು ಕಟ್ಟಿಕೊಡಬೇಕು. ಅಂದಾಗ ಮಾತ್ರ ಭವಿಷ್ಯದ ಭಾರತ ಈ ಮಕ್ಕಳಿಂದ ಉಜ್ವಲಗೊಳ್ಳುತ್ತದೆ ಎಂದು ಹೇಳಿದರು.
ಅಜಿಂ ಪ್ರೇಮ ಜಿ . ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್ ಗೌಡರ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕ ಭಾಗಶಃ ಸಹಾಯ, ಶಿಕ್ಷಕರ ಸಂಪೂರ್ಣ ಸಹಾಯ, ಗೆಳೆಯನ ಭಾಗಶಃ ಸಹಾಯ ಮತ್ತು ಸ್ವ ಕಲಿಕೆ ಎಂಬ ಐದು ತಟ್ಟೆಗಳಿರುತ್ತದೆ. ಮಗು ಮೇಲಿನ ಆರು ಹಂತಗಳನ್ನು ತಟ್ಟೆಯ ಚಲನೆಯೊಂದಿಗೆ ತನ್ನ ಮೈಲಿಗಲ್ಲನ್ನು ಪೂರೈಸುತ್ತಾನೆ ಎಂದು ತಿಳಿಸಿದರು.
ನಲಿಕಲಿ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮಣ್ ಇವರು
ಕಲಿಕಾ ಏಣಿ, ಮೆಟ್ಟಿಲು, ಲೋಗೊ, ಪ್ರಗತಿ ನೋಟ, ಕಾರ್ಡ, ವಾಚಕ, ಅಭ್ಯಾಸ ಪುಸ್ತಕ, ಮಕ್ಕಳ ಕಪ್ಪು ಹಲಗೆ, ಕಲಿಕಾ ಚಪ್ಪರ, ಗುಂಪು ತಟ್ಟೆ, ಹವಾಮಾನ ನಕ್ಷೆ ಇವು ನಲಿಕಲಿ ಪದ್ಧತಿಯಲ್ಲಿರುವ ಪರಿಕಲ್ಪನೆಗಳಿಂದ ಮಕ್ಕಳಲ್ಲಿ ಕಲಿಕೆ ಉಂಟಾಗುತ್ತದೆ. ಇವುಗಳ ಬಳಕೆಯ ಪ್ರಮಾಣ ಅಧಿಕಗೊಂಡಷ್ಟು ಮಗುವಿನ ಕಲಿಕೆ ಹೆಚ್ಚು ದೃಢಿಕರಣಗೊಳ್ಳುವುದು ಮತ್ತು ಕಲಿಕಾ ಮಟ್ಟ ಮೇಲ್ಮುಖವಾಗಿ ಚಲನೆಗೊಳ್ಳುವುದು. ನಲಿಕಲಿ ಬೋಧನೆ ವಿಧಾನದಲ್ಲಿ ಶಿಕ್ಷಕ ಬೊಧನೆಗೆ ಹೆಚ್ಚು ಅವಕಾಶವಿರುವುದಿಲ್ಲ. ಆದರೆ ಗಮನಿಸುವಿಕೆ ಮತ್ತು ಅನುಕೂಲಿಸುವಿಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಪೂರ್ವಸಿದ್ಧತೆ ಚಟುವಿಕೆಯಿಂದ ಮಗು ಸ್ವಕಲಿಕೆಗೆ ಓಳಗೊಳ್ಳುವವರೆಗೂ ಮೇಲಿನವರು ಮಗುವಿನ ಕಲಿಕೆಯಲ್ಲಿ ಸಹಕಾರವಾಗಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
ಉಳಿದಂತೆ ಸಿಂಧನೂರು ತಾಲೂಕು ಸಿಆರ್ ಪಿ ಸಂಘದ ಅಧ್ಯಕ್ಷರು ಹಾಗೂ ಕೋಳಬಾಳ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ ಹಾಗೂ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯಗುರುಗಳಾದ ಶ್ರೀ ರವೀಂದ್ರಗೌಡ ಮತ್ತು ಬಸಣ್ಣ ಮುಖ್ಯಗುರುಗಳು ಎಲೆಕೂಡ್ಲಿಗಿ . ಹಾಗೂ ಷಣ್ಮುಖ ಗೌಡ ಸಿ ಆರ್ ಪಿ . ಶ್ರೀ ನಾಗರಾಜ್ ಸಿ ಆರ್ ಪಿ ಗೌಡನಬಾವಿ. ಶ್ರೀ ಶಂಕರಗೌಡ ಸಿ ಆರ್ ಪಿ . ಶ್ರೀ ರಾಘವೇಂದ್ರ ಸಿ ಆರ್ ಪಿ ಶ್ರೀ ಗಿರೀಶ್ ಸಿ ಆರ್ ಪಿ ಅಜಿಂ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲಗಳಾದ ರಫೀಕ್
6 ಕ್ಲಸ್ಟರಿನ ನಲಿಕಲಿ ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು ಲಕ್ಷ್ಮಣ ನಿರೂಪಣೆ ಮಾಡಿದರು ಶ್ರೀಶೈಲ ಅಂಬಿಗರ್ ಅವರು ವಂದಿಸಿದರು
ಗುಡದೂರು ವಲಯದ ವಿವಿಧ ಶಾಲೆಗಳ ನಲಿಕಲಿ ಶಿಕ್ಷಕರು
ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.