ಆಧುನಿಕ ವಚನಗಳು
ಬಸವಗುರುವೆ ಬವಣೆ ಪರಿಹರಸು
ಭವಸಾಗರದಿ ದಡವ ಸೇರಿಸು ತಂದೆ
ಅಜ್ಞಾನನೀಗಿ ಅಹಂಕಾರವಳಿಸು
ಸುಜ್ಞಾನ ಸತ್ಪಥದಿ ಸದ್ವಿನಯದಲಿರಿಸಿ
ಸನ್ನಡತೆಯಲಿ ಮುನ್ನಡೆಸು ಗುರುವೆ
ಎನ್ನ ತವನಿಧಿ ವಿಜಯಮಹಾಂತೇಶ||
ಬಸವಗುರುವೆ ಗುರುವಿನಿಂದಧಿಕರಾರಿಲ್ಲ
ನಿಗರ್ವದಿ ನಿರಾಳವಾಗಿರಿಸು ತಂದೆ
ನಿಚ್ಚಳದಿ ಸ್ವಚ್ಚಮನವನಿರಿಸು
ಒಮ್ಮನದಿ ಲಿಂಗನಿಷ್ಟೆಯಲಿ ಒಲಾಡುವಂತಿರಿಸು
ಅಂಗಗುಣವಳಿಸಿ ಲಿಂಗಾಂಗಿಯಾಗಿಸು
ಎನ್ನ ತವನಿಧಿ ವಿಜಯಮಹಾಂತೇಶ.
ಬಸವಗುರುವೆ ದ್ವೇಷಾಸುಯೆಯಲಿ
ಬೆಂದು ಬಳಲಿರುವೆ ತಂದೆ
ಮನದಂಗಳವ ಗುಡಿಸಿ ಹಸನುಗೋಳಿಸಿ
ಬೆಂದಬದುಕನು ನೋಂದಜೀವವನು
ಚೆಂದಗೆಡಿಸದಂತಿರಿಸು ಗುರುವೆ
ಎನ್ನ ತವನಿಧಿ ವಿಜಯಮಹಾಂತೇಶ.
ಬಸವಗುರುವೆ ಅಂತರದಿ ಅಡಗಿಹ
ಕಾಮಕ್ಲೇಶಗಳ ಕಳೆದೋಗೆದು
ಕಾಯಕದಿ ಕೈಹಿಡಿದು ಮುನ್ನಡೆಸು
ಸತ್ಯತೆಗೆ ಶಿರಬಾಗಿ ಕರಮುಗಿಯುವಂತೆ
ನಿತ್ಯದಲಿ ನಮ್ಮನ್ನಿರಿಸು ಗುರುವೆ
ಎನ್ನ ತವನಿಧಿ ವಿಜಯಮಹಾಂತೇಶ.
ಬಸವಗುರುವೆ ಬಹಿರಂಗ ಬೆಳಗಿದರೆ
ಅಂತರಂಗ ಹೋಳೆವುದೆ ತಂದೆ
ಕರಣೇಂದ್ರಿಯಗಳ ಕಳೆಯ ತಗೆದಲ್ಲದೆ
ಆತ್ಮ ಹೊಳೆಯದು ನೋಡಾ
ಆತ್ಮನನುಪಮಗೋಳಿಸು ಗುರುವೆ
ಎನ್ನ ತವನಿಧಿ ವಿಜಯಮಹಾಂತೇಶ.
ಬಸವಗುರುವೆ ಒಡಲ ವ್ಯಾಮೋಹದಲಿ
ಉಟ್ಟುಂಡು ನಲಿದು ಗರ್ವದಲಿ ಮೆರೆದೆ
ಒಡಲಾಳದಧಿಪತಿಯ ಮನದಿ ಮರೆದೆ
ಕಡಲ ಅಲೆಯಂತೆ ಕಡುಕಷ್ಟ ಬಂದಾಗ
ಮೊರೆಯಿಡುತ ಬೊಬ್ಬಿಟ್ಟು ಸಲಹು ಎಂದೆ
ಬಿಡದೆ ನೀನು ಸಲುಹಿದೆ ಕರುಣಾಕರ
ಎನ್ನ ತವನಿಧಿ ವಿಜಯಮಹಾಂತೇಶ.
–ಸವಿತಾ. ಮಾಟೂರ. ಇಲಕಲ್ಲ.