ಗೋಕಾಕ ಉಪಕಾರಾಗೃಹದ ಖೈದಿಗಳು ನಮ್ಮ ಸಹೋದರರು
ತಪ್ಪು ತಿದ್ದಿಕೊಂಡು ಹೊಸ ಮನುಷ್ಯರಾಗಿ
e-ಸುದ್ದಿ ಗೋಕಾಕ
ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀಮತಿ ರಜನಿ ಅಶೋಕ್ ಜೀರಗ್ಯಾಳ ಅವರ ನೇತೃತ್ವದಲ್ಲಿ ಗೋಕಾಕದ ಉಪ ಕಾರಗೃಹದಲ್ಲಿಯ ಕೈದಿಗಳಿಗೆ ರಕ್ಷಾ ಬಂಧನದ ನಿಮಿತ್ತ ರಾಖಿ ತೊಡಿಸುವ ಕರ‍್ಯಕ್ರಮವನ್ನು ಸಿರಿಗನ್ನಡ ಮಹಿಳಾ ವೇದಿಕೆಯ ವತಿಯಿಂದ ತಾ.೨೨-೮-೨೦೨೧ ರಂದು ಹಮ್ಮಿಕೊಳ್ಳಲಾಯಿತು.
ಶ್ರೀ ಅಂಬರೀಶ್ ಕಾರಾಗೃಹದ ಅಧಿಕಾರಿಗಳು ,ಇವರ ಅಧ್ಯಕ್ಷತೆಯಲ್ಲಿ ಕರ‍್ಯಕ್ರಮ ನೆರವೇರಿತು.
ಶ್ರೀಮತಿ ಸುಧಾ ಮಠಪತಿಯವರ ಪ್ರರ‍್ಥನಾ ಗೀತೆಯೊಂದಿಗೆ ಕರ‍್ಯಕ್ರಮ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಶ್ರೀಮತಿ ಸುಗಂಧಾ ಡಂಬಳ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ , ಸೋದರಿಯರು ಸೋದರರಿಗೆ ಶುಭ ಹಾರೈಸಿ ರಕ್ಷಾ ಕವಚವನ್ನು ತೊಡಿಸುವ ಸಂಪ್ರದಾಯ ಮಹಾಭಾರತ ಕಾಲದಿಂದಲೂ ಸಾಗಿ ಬಂದಿರುವುದು ಹೆಮ್ಮೆಯ ಸಂಗತಿ ಕೌರವ ಕೃಷ್ಣರ‍್ಜುನರ ಯುದ್ಧದ ಸಮಯದಲ್ಲಿ ಸೋದರಿ ಸುಭದ್ರೆ ಅಣ್ಣ ಕೃಷ್ಣನಿಗೆ ರಕ್ಷಾ ಕವಚ ತೊಡಿಸಿ ಜಯಶೀಲರಾಗಲು ಹರಸಿದಳು.
ಅದರಂತೆ ಯುದ್ಧದಲ್ಲಿ ಜಯಭೇರಿ ಮೊಳಗಿದ್ದು ಈ ರಕ್ಷಾ ಕವಚದ ಬಲದಿಂದ ಎಂಬುದು ಅಭಿಮಾನದ ಸಂಗತಿ. ಎಲ್ಲರಿಗೂ ರಕ್ಷಣೆ ಅವಶ್ಯ. ಅದರಂತೆ ಈ ರಕ್ಷಾ ಕವಚ ಎಲ್ಲರಿಗೂ ಸಂರಕ್ಷಣೆಯ ದ್ಯೋತಕವಾಗಿದೆ. ಅದಕ್ಕಾಗಿ ೧೮ ವರ‍್ಷಗಳಿಂದ ನಮ್ಮ ಸಿರಿಗನ್ನಡ ಮಹಿಳಾ ವೇದಿಕೆ, ರಕ್ಷಾಬಂದನ, ಮಹಿಳಾ ದಿನಾಚರಣೆ, ವಿಜಯದಶಮಿ, ಇತ್ಯಾದಿ ಹಬ್ಬಗಳನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಾಸ್ತವಿಕ ಮಾತುಗಳನ್ನಾಡಿದರು. ಹಾಗೂ ಬಂಧಿಯಲ್ಲ ಬಂಧು ಎಂಬ ಕವನವನ್ನು ಓದಿದರು.
ನಂತರ ಜಿಲ್ಲಾಧ್ಯಕ್ಷಾರಾದ ಶ್ರೀಮತಿ ಜಯಾ ಚುನಮರಿಯವರು ಮಾತನಾಡಿ, ಕಾರಾಗೃಹದಲ್ಲಿದ್ದರೂ ನೀವೆಲ್ಲ ನಮ್ಮ ಅಣ್ಣ ತಮ್ಮ ತಂದೆಯ ಸಮಾನರು. ತಪ್ಪುಮಾಡುವುದು ಮನುಷ್ಯನ ಸ್ವಾಭಾವಿಕ ಗುಣ, ಹಾಗೇಯೇ ನಿಮ್ಮಲ್ಲಿಯೂ ಕೂಡ ಏನೋ ತಪುö್ಪಗಳಾಗಿರಬಹುದು. ಇನ್ನು ಮುಂದೆ ತಪುö್ಪ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿ ಸಜ್ಜನರಾಗಿರಿ. ಮನೆಯಲ್ಲಿ ನಿಮ್ಮ ತಂದೆ ,ತಾಯಿ, ಅಕ್ಕ, ಅಣ್ಣ ಎಲ್ಲರೂ ನಿಮಗಾಗಿ ವ್ಯಥೆ ಪಡುತ್ತಾರೆ. ಸಜ್ಜನರಾಗಿ ಬಂಧುಬಳಗವನ್ನು ಸಂತೋಷಪಡಿಸಿರಿ. ಅದುವೇ ನಿಜವಾದ ಜೀವನ, ಬಂಧುಗಳಲ್ಲಿ,ಪರಿಸರದಲ್ಲಿ ಸಮಾಜದಲ್ಲಿ ಒಂದಾಗಿ ಬೆರತು ಒಳ್ಳೇಯ ಬದುಕು ಬೆಳಗಿರಿ ಎಂದು ಮರ‍್ಮಿಕವಾಗಿ ಹೇಳಿದರು.
ನಂತರ ರಾಜ್ಯಾಧ್ಯಕ್ಷರಾದ ಶ್ರೀಮತಿ ರಜನಿ ಅಶೋಕ್ ಜೀರಗ್ಯಾಳ ಅವರು ಮಾತನಾಡಿ, ನೀವೆಲ್ಲರೂ ನಮ್ಮ ಸೋದರರು. ನಮ್ಮಂತೆಯೇ ನೀವೂ ಬಾಳಿ ಬದುಕುವವರು. ಈಗೇನಾದರು ತಪುö್ಪಗಳಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಮುಖ್ಯ. ಇನ್ನು ಮುಂದೆ ಯಾವುದೇ ತಪುö್ಪಗಳನ್ನು ಮಾಡುವುದಿಲ್ಲ ಸಜ್ಜನರಾಗಿ ಬಾಳುತ್ತೇವೆ. ಮನೆಯಲ್ಲಿ ತಂದೆ-ತಾಯಿ, ಅಕ್ಕ-ತಂಗಿ ಹಾಗು ಸಮಾಜದಲ್ಲಿಯಾ ಆರ‍್ಶರಾಗಿ ಬಂಗಾರದ ಬದುಕು ಸಾಗಿಸುತ್ತೇವೆ ಎಂದು ಪ್ರಮಾಣಮಾಡಿ ಇಂದಿನಿಂದ ಸದ್ಗುಣವಂತರಾಗಬೇಕೆಂದೇ ಸಿರಿಗನ್ನಡ ಮಹಿಳಾವೇದಿಕೆಯ ಮಹತ್ವದ ಉದ್ದೇಶ ಎಂದು ರಸವತ್ತಾಗಿ ಮಾತನಾಡಿದರು.
ನಂತರ ಸಭೆಯ ಅಧ್ಯಕ್ಷರಾದ ಶ್ರೀ ಅಂಬರೀಶ್ ಅವರು ಮಾತನಾಡುತ್ತ, ಸಿರಿಗನ್ನಡ ಮಹಿಳಾ ವೇದಿಕೆಯವರು ಇಂದು ಒಳ್ಳೇ ಕರ‍್ಯಕ್ರಮವನ್ನು ಹಮ್ಮಿಕೊಂಡು ನಿಮ್ಮೆಲ್ಲರಿಗೂ ರಕ್ಷಾ ಕವಚವನ್ನು ತೊಡಿಸಿ ಸಂತೋಷಪಡಿಸಿರುವುದು ನಿಜಕ್ಕೂ ಅತ್ಯಂತ ಹೆಮ್ಮೆಯ ಸಂಗತಿ. ಎಲ್ಲರೂ ಅತ್ಯಂತ ಹಿತನುಡಿಗಳನ್ನು ಹೇಳಿ ಎಲ್ಲರಲ್ಲಿಯೂ ಜಾಗೃತಿ ಮೂಡಿಸಿರುವುದು ನಿಜಕ್ಕೂ ಶ್ಲಾಘನೀಯ , ಸಿರಿಗನ್ನಡ ಮಹಿಳಾ ವೇದಿಕೆಯವರ ಈ ರಕ್ಷಾ ಬಂಧನ ಕರ‍್ಯಕ್ರಮ ರ‍್ಥಪರ‍್ಣವಾಗಿ ಜರುಗಿತು, ಎಂದು ಹೆಮ್ಮೆಯಿಂದ ಹೇಳಿದರು.
ಸಿರಿಗನ್ನಡ ಮಹಿಳಾ ವೇದಿಕೆಯ ತಾಲ್ಲೂಕ ಅಧ್ಯಕ್ಷರಾದ ಶ್ರೀಮತಿ ಸಂಗೀತಾ ಬನ್ನೂರ್ ರವರು ಹಾಗೂ ಉಪಧ್ಯಾಕ್ಷರಾದ ಶ್ರೀಮತಿ ವೈಶಾಲಿ ಭರಭರಿಯವರು ಕೂಡ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಅಮೇಲೆ ಶ್ರೀ ಅಂಬರೀಶ್ ಅವರಿಗೆ ಸಿರಿಗನ್ನಡ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು. ಅದರಂತೆ ಕಾರಾಗೃಹದ ವತಿಯಿಂದ ಶ್ರೀ ಅಂಬರೀಶ್ ಅವರು ಶ್ರೀಮತಿ ರಜನಿ ಜೀರಗ್ಯಾಳ ಅವರನ್ನು ಸನ್ಮಾನಿಸಿ ಸಂತೋಷ ವ್ಯಕ್ತಪಡಿಸಿದರು.
ಅದರಂತೆ ಶ್ರೀ ಚೇತನ ಜೋಗಣ್ಣವರ ಅವರು ಕೈದಿಗಳನ್ನುದ್ದೇಶಿ ತಪುö್ಪ ಮಾಡದೆ ಸಜ್ಜನರಾಗುವಂತೆ ಹಿತನುಡಿಗಳನ್ನಾಡಿದರು.ಅಲ್ಲದೆ ಶ್ರೀ ಚೇತನ ಜೋಗಣ್ಣ ಅವರ
ನಿರೂಪಣೆಯೊಂದಿಗೆ ಪ್ರಾರಂಭವಾದ ಕರ‍್ಯಕ್ರಮ ಅವರ ವಂದನರ‍್ಪಣೆಯೊಂದಿಗೆ ಮುಕ್ತಾಯವಾಯಿತು.
ಕೊನೆಗೆ ಸಿರಿಗನ್ನಡ ಮಹಿಳಾ ವೇದಿಕೆಯ ಎಲ್ಲ ಮಹಿಳೆಯರು ನೂರಾರು ಜನ ಕೈದಿಗಳಿಗೆ ರಕ್ಷಾ ಕವಚ ತೊಡಿಸಿ ಶುಭ ಹಾರೈಸಿ ಸಿಹಿ ಹಂಚಲಾಯಿತು. ನಂತರ
ಎಲ್ಲಾ ಮಹಿಳೆಯರಿಗೆ ಶ್ರೀ ಅಂಬರೀಶ್ ಅವರು ಅಭಿನಂದನಾ ಪತ್ರಗಳನ್ನು ನೀಡುವುದರೊಂದಿಗೆ ಕರ‍್ಯಕ್ರಮ ಮುಕ್ತಾಯವಾಯಿತು.