ಮುಸ್ಲಿಂ ಸಮುದಾಯದವರಿಗೆ ರುದ್ರಭೂಮಿಯನ್ನು ಮಂಜೂರು ಮಾಡುವಂತೆ ಒತ್ತಾಯ
e-ಸುದ್ದಿ, ಮಸ್ಕಿ
ತಾಲೂಕಿನ ಹೂವಿನಭಾವಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರಿಗೆ ರುದ್ರಭೂಮಿಯನ್ನು ಮಂಜೂರು ಮಾಡುವಂತೆ ಶನಿವಾರ ಮಸ್ಕಿ ಪಟ್ಟಣದ ಅಂಬೇಡ್ಕರ್ ಪ್ರತಿಮೆಯ ಮುಂದೆ ಕರ್ನಾಟಕ ರೈತ ಸಂಘ ಕೆ ಆರ್ ಎಸ್ ತಾಲೂಕ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಕೆ ಆರ್.ಎಸ್ ಅಧ್ಯಕ್ಷ ಸಂತೋಷ್ ಹಿರೇದಿನ್ನಿ ಮಾತನಾಡಿ ಹೂವಿನಬಾವಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸರ್ಕಾರಿ ಜಮೀನು ಕಬಳಿಸಲು ಮುಂದಾಗಿದ್ದಾರೆ. ಸದರಿ ಜಮೀನಿನಲ್ಲಿ ಮುಸ್ಲಿಂ ಸಮಾಜದವರು ಸುಮಾರು ಮೂರು ತಲೆಮಾರುಗಳಿಂದ ಸರ್ಕಾರಿ ಜಮೀನಿನಲ್ಲಿ ಅಂತ್ಯಸಂಸ್ಕಾರವನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಖಾಸಗಿ ವ್ಯಕ್ತಿ ಮುಸ್ಲಿಂರಿಗೆ ಅಂತ್ಯ ಸಂಸ್ಕಾರ ಕ್ಕೆ ಅವಕಾಶ ಕೊಡದೆ ಈ ಜಮೀನು ನನ್ನದು ಎಂದು ತಕರಾರು ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ಕರ್ನಾಟಕ ಸರ್ಕಾರ ಆದೇಶದಂತೆ ಪ್ರತಿ ಗ್ರಾಮಕ್ಕೆ ರುದ್ರಭೂಮಿಯನ್ನು ಮಂಜೂರು ಮಾಡಬೇಕೆಂದು ಆದೇಶವಿದ್ದರೂ ಕೂಡ ಅಧಿಕಾರಿಗಳು ನಿರ್ಲಕ್ಷದಿಂದ ಮುಸ್ಲಿಂ ಸಮಾಜದ ಶವಸಂಸ್ಕಾರ ಮಾಡಲು ಬಿಡುತ್ತಿಲ್ಲ. ತಹಸೀಲ್ದಾರ ಸ್ಥಳ ಪರಿಶೀಲಿಸಿ ರುದ್ರಭೂಮಿ ಒದಗಿಸುವಂತೆ ಒತ್ತಾಯಿಸಿದರು.
ಶಿರಸ್ತೆದಾರ ಅಕ್ತರ ಅಲಿ ಪ್ರತಿಭಟನೆಕಾರರಿಂದ ಮನವಿ ಸ್ವಿಕರಿಸಿದರು.