ಚಿಕ್ಕಬಾಗೇವಾಡಿಯ ಪಿಕೆಪಿಎಸ್‌ ಕಚೇರಿ ನೂತನ ಕಟ್ಟಡ ಹಾಗೂ ಗೋದಾಮು ಕಟ್ಟಡ ಶಂಕುಸ್ಥಾಪನೆ

ಚಿಕ್ಕಬಾಗೇವಾಡಿಯ ಪಿಕೆಪಿಎಸ್‌ ಕಚೇರಿ ನೂತನ ಕಟ್ಟಡ ಹಾಗೂ ಗೋದಾಮು ಕಟ್ಟಡ ಶಂಕುಸ್ಥಾಪನೆ

e-ಸುದ್ದಿ ಬೈಲಹೊಂಗಲ

ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯಲ್ಲಿ ಸುಮಾರು ರೂ.40 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯ ನೂತನ ಕಟ್ಟಡ ಹಾಗೂ ಗೋದಾಮು ಕಟ್ಟಡ ಕಾಮಗಾರಿಗೆ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ  ಶಂಕುಸ್ಥಾಪನೆ ನೇರವೇರಿಸಿದರು.

ಸಾಮಾನ್ಯ ಮತ್ತು ಬಡ ಜನರಿಗೆ ಆರ್ಥಿಕ ಮುಗ್ಗಟ್ಟು ನಿಗಿಸುತ್ತಿರುವ ಸಹಕಾರಿ ಕ್ಷೇತ್ರ ಬೆಳವಣಿಗೆಯಾಗಬೇಕಾದರೆ ಪರಸ್ಪರರಲ್ಲಿ ಸಹಕಾರವೂ ಅಗತ್ಯವಾಗಿದೆ. ಈ ಕ್ಷೇತ್ರದಲ್ಲಿ ಸ್ವಲ್ಪ ಅಸಹಕಾರ ಉಂಟಾದರೂ ಅದು ಸಂಸ್ಥೆ ಮೇಲೆ ಮರಿಣಾಮ ಬಿರುತ್ತದೆ. ಚಿಕ್ಕಬಾಗೇವಾಡಿ ಪಿಕೆಪಿಎಸ್‌. ಉತ್ತಮ ಪ್ರಗತಿಯಲಿದ್ದು, ಇದಕ್ಕೆ ಇಲ್ಲಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪ್ರಾಮಾಣಿಕ ಸೇವೆಯ ಪ್ರತಿಫಲದಿಂದ ಇಂತಹ ಒಳ್ಳೆಯ ಗೊದಾಮು ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತಸ ಸಂಗತಿ.
ಪಿಕೆಪಿಎಸ್ ವತಿಯಿಂದ ಬೀಜ ಗೊಬ್ಬರ ವಿತರಣೆ ಹಾಗೂ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆಯಿಂದ
ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಸಹಕಾರಿ ಬ್ಯಾಂಕ್‌ಗಳು ಜನರಿಗೆ ಹತ್ತಿರವಾಗಿದ್ದು ರೈತರು, ಶ್ರೀಸಾಮಾನ್ಯರು ಸಂಘಟಿತರಾಗಿ ಸಹಕಾರಿ ಕ್ಷೇತ್ರ ಬೆಳೆಸುವುದು ಅಗತ್ಯ ಎಂದರು.
ಇದೆ ವೇಳೆ ಬಹು ದಿನಗಳ ಬೇಡಿಕೆಯಾದ ಚಿಕ್ಕಬಾಗೇವಾಡಿ ಎಂ.ಕೆ. ಹುಬ್ಬಳ್ಳಿಯ ರಸ್ತೆ ಕಾಮಗಾರಿಗೆ ಸುಮಾರು ರೊ.3 ಕೋಟಿ ಅನುದಾನ ಮಂಜುರಾಗಿದೆ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಜಗದೀಶ ಕಲಾವಂತ ಮಾತನಾಡಿ ಬಿಡಿಸಿಸಿ ಬ್ಯಾಂಕಿನಿಂದ ಆರ್ಥಿಕ ನೆರವು ನೀಡುವುದರ ಜೊತೆಗೆ ಸಹಕಾರಿ ಸಂಘಗಳ ಮೂಲಕ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಗೊದಾಮು ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ 132 ಗೊದಾಮು ಕಟ್ಟಡ ನಿರ್ಮಾಣ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು

ಪಿಕೆಪಿಎಸ್ ವತಿಯಿಂದ ನೊತನವಾಗಿ ಚುನಾಯಿತರಾದ ಗ್ರಾಪಂ ಸದಸ್ಯರಿಗೆ ಹಾಗೂ ಕರೂನಾ ವಾರಿಯರ್ಸಗಳಿಗೆ ಸನ್ಮಾನಿಸಿದರು. ಚಿಕ್ಕಬಾಗೇವಾಡಿ ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ದೊಡ್ಡಕುರುಬರ, ತಿಗಡಿ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಜಕಾತಿ, ನಾವಲಗಟ್ಟಿ ಪಿಕೆಪಿಎಸ್ ಅಧ್ಯಕ್ಷ ಸಿದ್ದಪ್ಪ ಚಂಡು, ಮರಕಟ್ಟಿ ಪಿಕೆಪಿಎಸ್ ಅಧ್ಯಕ್ಷ ಸೋಮನಗೌಡ ಪಾಟೀಲ್. ಯರಡಾಲ ಪಿಕೆಪಿಎಸ್ ಅಧ್ಯಕ್ಷ ಈರಣ್ಣಾ ವಾರದ ,ಚಿಕ್ಕಬಾಗೇವಾಡಿ ಗ್ರಾಪಂ ಅಧ್ಯಕ್ಷ ಬಸವರಾಜ ಗಡೆನ್ನವರ, ಉಪಾಧ್ಯಕ್ಷೆ ಶಿವಲಿಂಗವ್ವಾ ದೊಡ್ಡಕುರುಬರ, ರವಿ ಪಾರಿಶ್ವಾಡ ಬಾಳಯ್ಯ ಚಿಕ್ಕಮಠ,ಶ್ರೀಕಾಂತ್ ಉಪ್ಪಾರ , ಬಿಡಿಸಿಸಿ ಬ್ಯಾಂಕ್ ತಿಗಡಿ ವಿಭಾಗದ ನಿರೀಕ್ಷರು ಎಸ್.ಎಸ್. ಪಾಟೀಲ ಹಾಗೂ ಎಲ್ಲಾ ಪಿಕೆಪಿಎಸ್ ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ಗ್ರಾಮಸ್ಥರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Don`t copy text!