ಗುಡದೂರಲ್ಲಿ ಜಾನಪದ ಕಲಾ ಸಂಭ್ರಮ
ಮಸ್ಕಿ: ಗ್ರಾಮೀಣ ಜನರ ಗಮನ ಸೆಳೆದ ಜಾನಪದ ತಂಡಗಳು
e-ಸುದ್ದಿ, ಮಸ್ಕಿ
ಮಸ್ಕಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಹಾಗೂ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಸಂಘ ಹಸಮಕಲ್ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಗುಡದೂರು ಗ್ರಾಮದಲ್ಲಿ ಬುಧವಾರ ನಡೆದ ಜಾನಪದ ಕಲಾ ಸಂಭ್ರಮ-21 ಸಡಗರ ಸಂಭ್ರಮದಿಂದ ನಡೆಯಿತು.
ವೀರಗಾಸೆ ಕುಣಿತ, ಹಗಲುವೇಷ, ಬ್ಯಾಂಜ್ ಮೇಳಾ, ಭಜನೆ ಸೇರಿದಂತೆ ವಿವಿಧ ಕಲಾ ತಂಡಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ತತ್ವ ಪದ, ಜಾನಪದ ಹಾಡುಗಳು, ಗೀಗಿ ಪದ, ಬುರ್ರಕೃಥೆ, ಸೋಬಾನ ಪದ ಸೇರಿದಂತೆ ಹಳ್ಳಿಯ ಸೊಗಡನ್ನು ಹೆಚ್ಚಿಸುವ ವಿವಿಧ ಕಲಾವಿದರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮುಖಂಡ ಆರ್. ಸಿದ್ದನಗೌಡ, ತಾಲ್ಲೂಕು ಮಾಜಿ ಅಧ್ಯಕ್ಷ ಶಿವಣ್ಣ ನಾಯಕ, ಈಶಪ್ಪ ದೇಸಾಯಿ, ಬಸವರಾಜ ಸ್ವಾಮಿ ಹಸಮಕಲ್, ಜಾನಪದ ಆಕಾಡೆಮಿ ಸದಸ್ಯ ನಾರಾಯಣಪ್ಪ ಮಾಢಶಿರವಾರ, ಚನ್ನಪ್ಪ ಸಾಹುಕಾರ, ಗ್ರಾಮ ಪಂಚಾಯಿತಿ ಅದ್ಯಕ್ಷ ಪದ್ದಮ್ಮ ವೆಂಕೋಬ ನಾಯಕ, ಉಪಾಧ್ಯಕ್ಷೆ ಶಾಂತಮ್ಮ ಗೋನಾಳ, ಜಾನಪದ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಜಂಬಣ್ಣ ಹಸಮಕಲ್, ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಮರೇಶ ಹಸಮಕಲ್, ಹುಸೇನಪ್ಪ ವಿಭೂತಿ ಸೇರಿದಂತೆ ಅನೇಕ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.
ಗ್ರಾಮೀಣ ಮಟ್ಟದಲ್ಲಿ ನಡೆದ ಜಾನಪದ ಕಲಾ ಸಂಭ್ರಮ ವಿಕ್ಷಿಸಲು ಮಹಿಳೆಯರು ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.