ಶ್ರಾವಣ ಕೊನೆ ಸೋಮವಾರ-ಬೆಟ್ಟದ ಮಲ್ಲಯ್ಯನ ದರ್ಶನ ಪಡೆದ ಭಕ್ತರು

ಎರಡನೇ ಶ್ರೀಶೈಲ ಎಂಬ ಹೆಸರು ಪಡೆದ ದೇವಸ್ಥಾನ
ಮಸ್ಕಿ: ಶ್ರಾವಣ ಕೊನೆ ಸೋಮವಾರ-ಬೆಟ್ಟದ ಮಲ್ಲಯ್ಯನ ದರ್ಶನ ಪಡೆದ ಭಕ್ತರು

 e-ಸುದ್ದಿ ಮಸ್ಕಿ

ಮಸ್ಕಿ: ಶ್ರಾವಣಮಾಸ ಕೊನೆಯ ಸೋಮವಾರ ಎರಡನೆಯ ಶ್ರೀಶೈಲ ಎಂದು ಪ್ರಸಿದ್ಧಿ ಪಡೆದ ಪಟ್ಟಣದ ಬೆಟ್ಟದ ಮೇಲಿರುವ ಮಲ್ಲಯ್ಯ (ಮಲ್ಲಿಕಾರ್ಜುನ)ನ ದೇವಸ್ಥಾನಕ್ಕೆ ತೆರಳಿದ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ ಅರಕೆ ತಿರಿಸಿಕೊಂಡರು.
ಬೆಳಿಗ್ಗೆ 4 ಗಂಟೆಯಿಂದಲೇ ಪಟ್ಟಣ ಸೇರಿದಂತೆ ಸುತ್ತಮುತ್ತ ತಾಲ್ಲೂಕುಗಳಿಂದ ಆಗಮಿಸಿದ್ದ ಮಹಿಳೆಯರು , ಮಕ್ಕಳು ಸೇರಿದಂತೆ ನೂರಾರು ಭಕ್ತರು ಸಾಲುಸಾಲಾಗಿ ಕಾಲ್ನಡೆಗೆಯಲ್ಲಿ ಬೆಟ್ಟ ಹತ್ತಿ ಮಲ್ಲಯ್ಯನ ವಿಗ್ರಹಕ್ಕೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವ ಮೂಲಕ ದೇವರ ದರ್ಶನ ಪಡೆದುಕೊಂಡರು.
ಶ್ರಾವಣ ಕೊನೆ ಸೋಮವಾರ ಹಿನ್ನೆಲೆಯಲ್ಲಿ ಬೆಳಿಗ್ಗೆ ಬಂಡೆಯಲ್ಲಿ ಮೂಡಿರುವ ಮಲ್ಲಯ್ಯ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರು ನೆರವೇರಿಸಿದರು. ಭಕ್ತರು ಇಡೀ ದಿನ ದೇವರ ದರ್ಶನ ಪಡೆದರು.

ಗಚ್ಚಿನಮಠರ ವರರುದ್ರಮುನಿ ಸ್ವಾಮೀಜಿ, ಶಾಸಕ ಆರ್. ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ತಹಶೀಲ್ದಾರ್ ಕವಿತಾ ಆರ್. ಸೇರಿದಂತೆ ಅನೇಕರು ಮುಖಂಡರು, ಅಧಿಕಾರಿಗಳು ಸಹ ಬೆಟ್ಟ ಹತ್ತಿ ಮಲ್ಲಯ್ಯನ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.

Don`t copy text!