ಮಸ್ಕಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ, ಸಾಂಸ್ಕೃತಿಕ ಸಂಘದಿಂದ ಕಲ್ಯಾಣ ಉತ್ಸವ ಆಚರಣೆ
ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟ ಗುರಿ ಇರಲಿ-ತಹಸೀಲ್ದಾರ ಕವಿತಾ.ಆರ್.
e-ಸುದ್ದಿ, ಮಸ್ಕಿ
ಕಲ್ಯಾಣ ಕರ್ನಾಟಕ ಇನ್ನಷ್ಟು ಅಭಿವೃದ್ಧಿ ಹೊಂದಬೇಕಾದರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿ ಉತ್ತಮ ಸಾಧನೆ ಮಾಡಿದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ತಹಸೀಲ್ದಾರ್ ಕವಿತಾ.ಆರ್. ಹೇಳಿದರು.
ಪಟ್ಟಣದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ, ಸಾಂಸ್ಕೃತಿಕ ಸಂಘದ ವತಿಯಿಂದ ಕಲ್ಯಾಣ ಉತ್ಸವ ಆಚರಣೆ ಹಾಗೂ ಬದುಕಿಗೊಂದು ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ನಿಜಾಮರ ಕಪಿಮುಷ್ಟಿಯಿಂದ ಬಿಡುಗಡೆಯಾದ ನಂತರ ಈ ನಮ್ಮ ಭಾಗದಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿ ಅಬಿವೃದ್ಧಿ ಹೊಂದಿದೆ. ಈಗೀನ ಏಳು ಜಿಲ್ಲೆಗಳು ಅಭಿವೃದ್ಧಿ ಹೊಂದಿಲ್ಲ ಎಂಬ ಭಾವನೆ ನಮ್ಮಲ್ಲಿ ಬೇಡ. ನಾವೂ ಶಿಕ್ಷಣದಲ್ಲಿ ಹೆಚ್ಚು ಉನ್ನತ ಹೊಂದಿ ಒಳ್ಳೆಯ ಪದವಿಗಳನ್ನು ಪಡೆದುಕೊಂಡಾಗ ಮಾತ್ರ ಕಲ್ಯಾಣ ಕರ್ನಾಟಕದ ಹೆಸರು ಸಾರ್ಥಕವಾಗುತ್ತದೆ ಎಂದರು. ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿಕಾಸ ಆಕಾಡೆಮೆಯ ಜಿಲ್ಲಾ ಸಹ ಸಂಚಾಲಕ ವಿರೇಶ ಸೌದ್ರಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗ ಕೊಡುವ ಕೈಯಾಗಬೇಕು ಬೇಡುವ ಕೈಯಾಗಬಾರದು. ಸ್ವಸ್ಥ ಸಮಾಜ ನಿರ್ಮಾಣ ಸಜ್ಜನ ಸಾರ್ವಜನಿಕರಿಂದ ಆಗಬೇಕು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕೃತಿಕ ಸಂಘದಿಂದ ಸ್ವಸ್ಥ ಸಮಾಜ ನಿರ್ಮಾಣದ ಕಾರ್ಯ ನಡೆದಿದೆ ಅದರಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಈ ಭಾಗದ ಅಭಿವೃದ್ದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಸಂಸ್ಥೆಯ ಉಪಾಧ್ಯಕ್ಷ ಶಿವಕುಮಾರ.ಎನ್ ಮಾತನಾಡಿದರು. ಮಾಜಿ ತಾಪಂ ಸದಸ್ಯ ಗವಿಸಿದ್ದಪ್ಪ ಸಾಹುಕಾರ್, ಕಂದಾಯ ಇಲಾಖೆಯ ಸಯ್ಯದ್ ಅಕ್ತರ ಅಲಿ, ಮುಖ್ಯ ಶಿಕ್ಷಕರಾದ ಸಿದ್ದಾರೆಡ್ಡಿ ಗಿಣಿವಾರ, ಮೌನೇಶ ಹೊಸಮನಿ ಸುರೇಶ ಕೆಂಭಾವಿ ಮಠ, ಶಿಕ್ಷಕಿ ಪಾರ್ವತಿ ಸೇರಿದಂತೆ ಇನ್ನಿತರರು ಇದ್ದರು.