ಬುದ್ದಿನ್ನಿ ಕಣ್ವಮಠದ ಅಭಿವೃದ್ಧಿ ಗೆ ಸಹಕಾರ ನೀಡುವೆ-ಬಸನಗೌಡ ತುರ್ವಿಹಾಳ

ಬುದ್ದಿನ್ನಿ ಕಣ್ವಮಠದ ಅಭಿವೃದ್ಧಿ ಗೆ ಸಹಕಾರ ನೀಡುವೆ-ಬಸನಗೌಡ ತುರ್ವಿಹಾಳ
e- ಸುದ್ದಿ ‌ಮಸ್ಕಿ
ಮಸ್ಕಿ: ತಾಲ್ಲೂಕಿನ ಬುದ್ದಿನ್ನಿ ಗ್ರಾಮದ ಕಣ್ವಮಠದ ಮಾಧವ ತೀರ್ಥರ ವೃಂದಾವನ ಸಮಗ್ರ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.
ಬುದ್ದಿನ್ನಿ ಗ್ರಾಮದ ಮಾಧವ ತೀರ್ಥರ ವೃಂದಾವನದಲ್ಲಿ ಭಾನುವಾರ 1008 ವಿದ್ಯಾಕಣ್ವವಿರಾಜ ತೀರ್ಥರ ದ್ವಿತೀಯ ಚಾತುರ್ಮಾಸ್ಯ ವೃತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ‘ ಬುದ್ದಿನ್ನಿ ಗ್ರಾಮದಲ್ಲಿರುವ ಮಾಧವತೀರ್ಥರ ವೃಂದವನ ರಾಜ್ಯದಲ್ಲಿಯೇ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಅತಿ ಹೆಚ್ಚು ಭಕ್ತರನ್ನು ಹೊಂದಿರುವ ವೃಂದಾವನದ ಸಮಗ್ರ ಅಭಿವೃದ್ಧಿಯಾಗಬೇಕಾಗಿದೆ. ಅದಕ್ಕಾಗಿ ವಿಶ್ವಸ್ಥ ಮಂಡಳಿಯವರು ಕೈಗೊಳ್ಳುವ ಕೈಗೊಳ್ಳುವ ಯೋಜನೆಗಳಿಗೆ ಶಾಸಕನಾಗಿ ನಾನು ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು.
ಶಾಸಕನಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನರ ಭರವಸೆಗಳಂತೆ ನಾನು ಅಭಿವೃದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡುವುದಾಗಿ ತಿಳಿಸಿದರು.
ಹುಣಸಿಹೊಳೆಯ ವಿದ್ಯಾಕಣ್ವವಿರಾಜ ತೀರ್ಥರು ಮಾತನಾಡಿ ‘ಮಾಧವ ತೀರ್ಥರ ವೃಂದಾವನ ಅಸಂಖ್ಯಾತ ಭಕ್ತರನ್ನು ಹೊಂದಿದೆ, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೃಂದಾವನದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಧವತೀರ್ಥರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಪ್ರಲ್ಹಾದ್ ರಾವ್ ದೇಸಾಯಿ, ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಬಸ್ಸಪ್ಪ ಭಜಂತ್ರಿ, ಉಪಾಧ್ಯಕ್ಷೆ ರೇಣುಕಮ್ಮ ಕಾಟಗಲ್,  ಗುರುರಾಜ ದೇಸಾಯಿ, ಹಂಪಮ್ಮ ದೇವರಮನಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಹನುಮೇಶ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
ಕಣ್ವಮಠದ ಸ್ವಾಮೀಜಿ ಶ್ರೀರಕ್ಷೆ ಇತ್ತು – ಪ್ರತಾಪಗೌಡ ಪಾಟೀಲ
ಮಸ್ಕಿ : 2008 ರ ಚುನಾವಣೆಗಿಂತ ಮುಂಚೆ ಕಣ್ವಮಠದ ವಿದ್ಯಾ ಭಾಸ್ಕರ್ ತೀರ್ಥರು ನನಗೆ ಆರ್ಶೀವಾದ ಮಾಡಿ ನೀನು ಶಾಸಕನಾಗುತೀಯಾ ಎಂದಿದ್ದರು. ಅವರ ಆರ್ಶಿವಾದದಂತೆ ನಾನು ಮೂರು ಬಾರಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಬುದ್ದಿನ್ನಿ ಗ್ರಾಮದ ಮಾಧವ ತೀರ್ಥರ ವೃಂದಾವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ವೃಂದಾವನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ $ 1.5 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣ. ಕುಡಿಯುವ ನೀರು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.
ಕೆಲವೊಂದು ಕಾರಣಗಳಿಂದಾಗಿ ಉಪ ಚುನಾವಣೆಯಲ್ಲಿ ನಾನು ಸೋಲಬೇಕಾಯಿತು, ಬರುವ ಚುನಾವಣೆಯಲ್ಲಿ ಕ್ಷೇತ್ರದ ಮತದಾರರ ಆರ್ಶೀವಾದ ಹಾಗೂ ಕಣ್ವಮಠದ ಸ್ವಾಮೀಜಿಗಳ ರಕ್ಷೆಯಿಂದ ಪುನಃ ಶಾಸಕನಾಗಿ ಆಯ್ಕೆಯಾಗುವೆ ಎಂದರು.
Don`t copy text!