ಲಿಂಗಸುಗೂರು ತಾಲೂಕಿನ ಗೌಡೂರು ಹತ್ತಿರ NRBC ಮುಖ್ಯ ನಾಲೆ ಕುಸಿತ
e- ಸುದ್ದಿ ಲಿಂಗಸುಗೂರು
ತಾಲ್ಲೂಕಿನ ಗೌಡೂರು ಗ್ರಾಮ ಹತ್ತಿರ ಹಾದು ಹೋಗಿರುವ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ನಿನ್ನೆ ರಾತ್ರಿ ಸುರಿದ ಮಳೆಗೆ ಕುಸಿದು ಹೋಗಿದೆ.
ನಾರಾಯಣಪುರ ಜಲಾಶಯದ ಮುಖ್ಯ ನಾಲೆ 44-45 ಕಿಲೋಮೀಟರ್ ಒಳಗಡೆ ಈ ನಾಲೆ ಮಾಡಿ 2 ತಿಂಗಳು ಸಹ ಕಳೆದಿಲ್ಲ ಆಗಲೇ ಕಾಲುವೆ ಹೊಡೆದು ಹೋಗಿದ್ದು ಗುಣಮಟ್ಟದ ಕಾಮಗಾರಿಯೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ .
950 ಕೋಟಿ ವೆಚ್ಚದ ನಾಲೆಯ ಆಧುನೀಕರಣ ಕಾಮಗಾರಿ 01-90 km ರ ವರೆಗೆ ಡಿ.ವೈ.ಉಪ್ಪಾರ್ ಕಂಪನಿಯವರಿಗೆ ಗುತ್ತಿಗೆ ಕೊಡಲಾಗಿದೆ .ಉಪ್ಪಾರ್ ಕಂಪನಿಯವರು ಕಳಪೆ ಕಾಮಗಾರಿ ಮಾಡಿ ಕೈ ತೊಳೆದು ಕೊಂಡಿದ್ದಾರೆ . ಇನ್ನೂ ಸ್ವಲ್ಪ ಕಾಮಗಾರಿಯೂ ಬಾಕಿ ಇದೆ.
ಮಳೆಯಿಂದಾಗಿ ರೈತರ ಜಮೀನಿನಿಂದ ನೀರು ಕಾಲುವೆಗೆ ಹರಿಯುತ್ತಿರು ಸ್ಥಳದಲ್ಲಿ ಈ ರೀತಿ ದೃಶ್ಯಾವಳಿಗಳು ಕಂಡುಬಂದಿದೆ….
ಕಳಪೆ ಕಾಮಗಾರಿ ಮಾಡಿದ ಡಿ.ವೈ.ಉಪ್ಪರ್ ಕಂಪೆನಿಯ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಿ ಸರ್ಕಾರದ ಹಣ ಲೂಟಿ ಮಾಡಿದ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಸಿದ್ದೇಶ ಹಾಗೂ ಈ ಭಾಗದ ರೈತರು ಆಗ್ರಹಿಸಿದ್ದಾರೆ
ಕಳಪೆ ಕಾಮಗಾರಿಯಿಂದಾಗಿ ಕಾಲುವೆ ಹೊಡೆದು ಹೊದರು ಅಧಿಕಾರಿಗಳಾಗಲಿ , ಗುತ್ತಿಗೆದಾರರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರಾದ ಸಿದ್ದೇಶ ಗೌಡೂರು ಆರೋಪಿಸಿದ್ದಾರೆ.