ಜೈನಮುನಿಗಳು ಮತ್ತು ನಮ್ಮವರು.

ಜೈನಮುನಿಗಳು ಮತ್ತು ನಮ್ಮವರು.

ಸಮಷ್ಟಿ ಬೆಳೆಯಲೆಂಬ ಭಾವ.
ಮುನಿಯಾಗುವ ಮುನ್ನ
ಧನ ಕನಕ ಹಂಚುತ್ತಾರೆ.
ತೂರುತ್ತಾರೆ ಇಲ್ಲದವರಿಗೆ.
ಸುಟ್ಟು ಬಿಡುತ್ತಾರೆ ವಿಷಯಾದಿ
ಎಲ್ಲವನ್ನು ಗೆದ್ದು ಬೆತ್ತಲಾಗುತ್ತಾರೆ.
ಮೌಲ್ಯ ಉಳಿಸಿ ಬದುಕುತ್ತಾರೆ.

ನಮ್ಮವರು ಸಿಂಹಾಸನ ಪೀಠಕ್ಕೆ
ಸ್ವಾರ್ಥ ವಂಚನೆ ಗುದ್ದಾಡುತ್ತಾರೆ
ಜಾತ್ರೆ ಉತ್ಸವ ಪರ್ವ ಮೇಳ
ವಚನ ಅಂಕಿತ ಗ್ರಂಥ ತಿದ್ದುತ್ತಾರೆ .
ಮೂರ್ತಿ ನಿಲ್ಲಿಸಲು ದುಡ್ಡು ಎತ್ತುತ್ತಾರೆ.
ಗೆದ್ದು ನಮ್ಮನ್ನು ಬೆತ್ತಲು ಮಾಡುತ್ತಾರೆ .
ಮೌಢ್ಯ ಬೆಳೆಸಿ ನಮ್ಮನು ಕೊಲ್ಲುತ್ತಾರೆ.

ಡಾ.ಶಶಿಕಾಂತ,ಪಟ್ಟಣ.ರಾಮದುರ್ಗ.

Don`t copy text!