ಜನರ ಆರ್ಶೀವಾದದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆ –  ಪ್ರತಾಪಗೌಡ ಪಾಟೀಲ್

ಮಾಜಿ ಶಾಸಕ ಪ್ರತಾಪಗೌಡರ 67 ನೇ ಹುಟ್ಟು ಹಬ್ಬ ಆಚರಣೆ
ಜನರ ಆರ್ಶೀವಾದದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆ –  ಪ್ರತಾಪಗೌಡ ಪಾಟೀಲ್
e- ಸುದ್ದಿ ಮಸ್ಕಿ
ಮಸ್ಕಿ : ಕ್ಷೇತ್ರದ ಮತದಾರರ ಆರ್ಶೀವಾದ ಹಾಗೂ ಅವರ‌ ಸಲಹೆ ಸಹಕಾರದಿಂದ ಮೂರು ಬಾರಿ ಶಾಸಕನಾಗಿ‌ ಆಯ್ಕೆಯಾಗಿ ಜನರ ಸೇವೆ ಮಾಡಲು ಸದವಕಾಶ ದೊರೆಯಿತು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ನೆನಪಿಸಿಕೊಂಡರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ  ಶುಕ್ರವಾರ ನಡೆದ ತಮ್ಮ 67 ನೇ ಹುಟ್ಟು ಹಬ್ಬ,     ಪ್ರತಾಪಗೌಡ ಪಾಟೀಲ್ ಫೌಂಡೇಶನ್‌ ಉದ್ಘಾಟನೆ,  ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಮೂರು ಬಾರಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ‌ ಶ್ರಮಿಸಿದ್ದೇನೆ. ಉಪ ಚುನಾವಣೆಯಲ್ಲಿ ಸೋಲಾಗಿರಬಹುದು, ಆದರೆ, ಮತದಾರರ ಮನಸ್ಸಿನಲ್ಲಿ‌ ಉಳಿಯುಂತೆ ಕೆಲಸ ಮಾಡಿದ್ದೇನೆ ಎಂದರು.
2023 ರ ಸಾರ್ವತ್ರಿಕ ‌ಚುನಾವಣೆಯಲ್ಲಿ ತಮ್ಮೇಲ್ಲರ ಸಹಕಾರದಿಂದ ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗಿ ಮತ್ತೆ ತಮ್ಮ ಸೇವೆ ಮಾಡಲು ಬಯಸುತ್ತೇನೆ. ಕ್ಷೇತ್ರದ ಜನರು ನನ್ನ ಕೈ ಬಿಡುವುದಿಲ್ಲ ಎಂಬ ಆತ್ಮವಿಶ್ವಾಸ ನನಗೆ ಇದೆ ಎಂದರು.
ನನ್ನ 67 ನೇ ಹುಟ್ಟು ಹಬ್ಬವನ್ನು  ಅಭಿಮಾನಿಗಳು ಹಾಗೂ ಕಾರ್ಯಕರ್ತರು ವಿವಿಧ ಸಾಮಾಜಿಕ ಚಟುಚಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.  ಕೊವಿಡ್ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಕೊವಿಡ್ ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ,  ಮುಸ್ಲಿಮ್ ಧರ್ಮ ಗುರು ಎಂ.ಕೆ.  ಜಿಲಾನಿ ಖಾಜಿ, ಚರ್ಚ್ ಫಾದರ್ ಚಾರ್ಲಸ್ ಸುಂದರ್ ರಾಜ್ ,  ನಿವೃತ್ತ ಪ್ರಾರ್ಚಾಯ ಸಿ. ಶರಣಪ್ಪ, ಪ್ರತಾಪಗೌಡ ಪಾಟೀಲ್ ಪೌಂಡೇಶನ್ ಅಧ್ಯಕ್ಷ ಪ್ರಸನ್ನ ಪಾಟೀಲ್ ಸೇರಿದಂತೆ ಇತರರು ಇದ್ದರು.
ಹುಟ್ಟು ಹಬ್ಬದ ನಿಮಿತ್ತ ಜಿಲ್ಲಾ ಮಟ್ಟದ ಕೊರೊಕೆ ಗಾಯನ ಸ್ಪರ್ಧೆ ನಡೆಯಿತು.
ಹಿನ್ನೆಲೆಗಾಯಕ   ರವೀಂದ್ರ ಸೋರಗಾವಿ,  ಸೌಮ್ಯಶ್ರೀ ಶ್ರೀರಾಮ, ಗೀತ ರಚನೆಕಾರ ಶಿವು ಬೇರಿಗಿ,  ರುದ್ರಮುನಿ‌ ಗೋರೆಬಾಳ ಇತರರು ಇದ್ದರು.
 ಬೆಳಿಗ್ಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ನಡೆಸಲಾಯಿತು. ಪ್ರತಾಪಗೌಡ ಯುವ ಸೇನಾ ಕಾರ್ಯಕರ್ತರಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು. ಚೇತನ ಪಾಟೀಲ್ ಸೇರಿದಂತೆ ಯುವ ಸೇನಾ ಕಾರ್ಯಕರ್ತರು ಪಾಲ್ಗೊಂಡಿದ್ದರು.
Don`t copy text!