ಗಾಂಧಿಜೀ ಬದುಕೇ ಸತ್ಯ ದರ್ಶನ- ಮಧುಮತಿ ದೇಶಪಾಂಡೆ
e- ಸುದ್ದಿ ಮಸ್ಕಿ
ಗಾಂಧೀಜಿ ಜಗತ್ತಿಗೆ ಒಂದು ಮಾದರಿ. ಗಾಂಧೀಜಿಯ ಬದುಕೇ ಸತ್ಯ ಮಾರ್ಗದ ದರ್ಶನ ವಾಗಿದೆ ಎಂದು ನಿವೃತ್ತ ಉಪನ್ಯಾಸಕಿ ಸಿಂಧನೂರಿನ ಮಧುಮತಿ ದೇಶಪಾಂಡೆ ಅಭಿಪ್ರಾಯ ಪಟ್ಟರು.
ಪಟ್ಟಣದ ಹೊರವಲಯದಲ್ಲಿ ಗುಡ್ಡಕ್ಕೆ ಹೊಂದಿಕೊಂಡ ಶಿವಪ್ರಸಾದ ಕ್ಯಾತ್ನಟ್ಟಿ ಅವರ ಗಾಂಧಿ ಕುಟೀರದಲ್ಲಿ ಗಾಂಧೀ ಜಯಂತಿ ಅಂಗವಾಗಿ ಶನಿವಾರ ಜರುಗಿದ ಗಾಂಧಿ ಕುರಿತ ಕವಿಗೋಷ್ಡಿ ಹಾಗೂ ಗಾಂಧೀಜಿಯ ಬರಹಗಳ ಓದು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲ ಬದಲಾದಂತೆ ನಾವು ಬದಲಾಗಿದ್ದೇವೆ. ಗಾಂಧೀಜಿಯ ತತ್ವಗಳನ್ನು ಜಗತ್ತು ಸ್ವೀಕರಿಸುತ್ತಿರುವಾಗ ಭಾರತೀಯರಾದ ನಾವು ಗಾಂಧೀಜಿಯ ವಿಚಾರಗಳ ಸರಿ ತಪ್ಪುಗಳ ಚರ್ಚೆಯಲ್ಲಿ ತೊಡಗಿದ್ದೇವೆ ಎಂದು ಆತಂಕ ವ್ಯಕ್ತ ಪಡಿಸಿದರು.
ಗಾಂಧೀಜಿಯ ಎಲ್ಲ ಪ್ರಯೋಗಗಳಿಗೆ ಕಸ್ತೂರಿ ಬಾಯಿ ಪ್ರೇರಣೆ ಸಹನೆ ಮುಖ್ಯವಾಗಿತ್ತು ಎಂದು ಮಧುಮತಿ ದೇಶಪಾಂಡೆ ವಿವರಿಸಿದರು.
ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಮಹಾಂತೇಶ ಮಸ್ಕಿ, ಶಿಕ್ಷಕ ಶಂಕರ ಸಕ್ರಿ, ಆದಪ್ಪ ಹೆಂಬಾ, ಪತ್ರಕರ್ತ ವೀರೇಶ ಸೌದ್ರಿ, ದೇವೆಂದ್ರಗೌಡ ಗಾಂಧಿಜೀ ಕುರಿತು ಮಾತನಾಡಿದರು.
ಕವಿಗಳಾದ ಬೀರು ದೇವರಮನಿ, ಅಮರೇಶ ಪಾಟೀಲ, ದೇವರಾಜ ಘಂಟಿ, ಪಂಪಯ್ಯ ಸಾಲಿಮಠ ಅಂತರಗಂಗಿ ಕವಿತೆ ವಾಚಿಸಿದರು.
ಅಕ್ಷರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಗುಂಡುರಾವ್ ದೇಸಾಯಿ, ಬಂಡಾರ ಪ್ರಕಾಶನದ ಪರುಷರಾಮ ಕೊಡಗುಂಟಿ ಮಾತನಾಡಿದರು.
ವಿಶೇಷ
ಗಾಂಧೀಜಿಯ ಸಾಬರಮತಿ ಆಶ್ರಮದಂತೆ ಕಟ್ಟಿರುವ ಶಿವಪ್ರಸಾದ ಕ್ಯಾತ್ನಟ್ಟಿ ಅವರಮನೆ, ಮನೆ ಮುಂದೆ ಗಾಂಧೀಜಿಯ ಭಾವಚಿತ್ರಕ್ಕೆ ಆಗಮಿಸದ ಶೋತ್ರಗಳು ಹೂ ಸಮರ್ಪಿಸಿ , ಪ್ರತಿಯೋಬ್ಬರು ಗಾಂಧೀ ಟೋಪಿ ಧರಿಸಿ ಕಾರ್ಯಕ್ರಮ ನಡೆಸಿದ್ದು ವಿಶಿಷ್ಠವಾಗಿತ್ತು.
ಚಂದದ ಕಾರ್ಯಕ್ರಮ… ಮಸ್ಕಿ ಗೆಳೆಯರ ಬಳಗಕ್ಕೆ ಅಭಿನಂದನೆಗಳು