ನಕ್ಕು ನಗಿಸುವ ಕಲಾವಿದಾನ ಗೋಳು ಕೇಳುವರಿಲ್ಲ
e-ಸುದ್ದಿ ಸಿಂಧನೂರು
ರಂಗಭೂಮಿ ಸಮಾಜದ ಅಂಕು ಡೊಂಕುಗಳನ್ನು ಕಲಾವಿದರ ಪಾತ್ರಗಳ ಮೂಲಕ ಅಭಿನಯಿಸಿ ಸಾರ್ವಜನಿಕರಿಗೆ ತಿಳಿಪಡಿಸುವ ಕೈಗನ್ನಡಿಯಾಗಿದೆ ಆದರೆ ಕಲಾವಿದರ ಬದುಕು ಕಂಗಾಲಾಗಿದೆ. ಕೋರೊನಾ ಎನ್ನುವ ಹೆಮ್ಮಾರಿಗೆ ಸಿಕ್ಕು ಕಲೆ ತೊರಿಸುವವರ ಪಾಡು ಹೇಳತೀರದು,ಆದರೆ ತುತ್ತು ಅನ್ನಕ್ಕಾಗಿ ಕೈಚಾಚಿದರೆ ಅವಮಾನ ಎಂದು ಎಷ್ಟೊಂದು ಕಲಾವಿದರ ಬದುಕು ಬೀದಿಗೆ ಬಂದಿವೆ ಎಂದು ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ಜಿಲ್ಲಾಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅಭಿಪ್ರಾಯ ಪಟ್ಟರು.
ಶ್ರೀ ಮಹಾಂತಪ್ಪ ಯರದಿಹಾಳ ಕೊಟೆ ಸಿಂಧನೂರು ಇವರು ಕಲಾವಿದರ ರಕ್ಷಣೆಗೆ ನಿಂತ ಶ್ರೀ ಸಂತ ಶಿಶುನಾಳ ಶರೀಫ ಶಿವಯೋಗಿ ನಾಟ್ಯ ಸಂಘ ತೆಗ್ಗಿಹಳ್ಳಿಯ ಮಾಲಿಕರಾದ ಶ್ರೀ ಖತಲ್ಲ್ ಸಾಬ ಬಣಗಾರ ಅವರನ್ನು ಸನ್ಮಾನಿಸಲಾಯಿತು,ಈ ಸಂದರ್ಭದಲ್ಲಿ ರಾಯಚೂರು ಸುದ್ದಿ ಬಿಂಬ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಶ್ರೀ ಡಿ ಎಚ್ ಕಂಬಳಿ.ಹಾಗೂ ಪತ್ರಕರ್ತರಾದ ಶ್ರೀ ಪ್ರಲ್ಹಾದ ಗುಡಿ ಉಪಸ್ಥಿತರಿದ್ದರು.