ವಿಶ್ವ ಅಂಚೆ ದಿನದ ಶುಭಾಶಯಗಳು.
ಅಂಚೆ ಅಣ್ಣಾ
ಅಂಚೆಯಣ್ಣ ಬರುತಿಹನು
ಸೈಕಲ್ ತುಳಿಯುತ ನೋಡಲ್ಲಿ
ದೂರದ ಊರಿನ ಸುದ್ದಿಯನು
ತಿಳಿಸುವ ಕಾಗದ ಹಂಚುತಲಿ..
ಊರೊಳಗಿರಲಿತೋಟದಲಿರಲಿ
ಎಲ್ಲರ ಮನೆಗೆ ಇವನ ಭೇಟಿ
ಮಳೆಯೇಇರಲಿಚಳಿಯೇಇರಲಿ
ತಪ್ಪದು ಎಂದೂ ಇವನ ಡ್ಯುಟಿ.
ಸಂತಸಸುದ್ದಿಗೆಖುಷಿಪಡುವಂತೆ
ದುಃಖದಸುದ್ದಿಗೆಅಳುವನುತಾನೂ
ದೂರದಮಕ್ಕಳ ಜೀವನಕಥೆಯ
ಹೇಳುವನಜ್ಜಗೆ ಚಂದದಿತಾನು.
ವ್ಯಥೆಯಲಿಹೇಳುವೆನಾನಿಂದು
ಮುರಿದಿದೆಪ್ರೀತಿಯ-ಬಂಧುರವು
ಮೊಬೈಲ್ ಗೀಳಿಗೆಸಿಲುಕಿದಮಂದಿ
ಮರೆತರುಕಾಗದ ಬರೆವುದನು
–ಹಮೀದಾ ಬೇಗಂ ಸಂಕೇಶ್ವರ