ಎಚ್.ಕೆ.ಡಿ.ಬಿ ಹಣ ಸಂಪೂರ್ಣ ಬಳಕೆಗೆ ಬದ್ಧ-ಶ್ರೀರಾಮುಲು

 

ಎಚ್.ಕೆ.ಡಿ.ಬಿ ಹಣ ಸಂಪೂರ್ಣ ಬಳಕೆಗೆ ಬದ್ಧ-ಶ್ರೀರಾಮುಲು

e- ಸುದ್ದಿ ಮಸ್ಕಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮಕ್ಕೆ ಪ್ರತಿವರ್ಷ ಕೊಡುವ ೧೫೦೦ ಕೋಟಿ ರೂ. ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ನಿಗದಿತ ಅವಧಿಯಲ್ಲಿ ಹಣ ಬಳಸಿಕೊಂಡು ಈ ಭಾಗದ ಅಭಿವೃದ್ಧಿಗೆ ಕ್ರಮ‌ಕೈಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ಉಪ ಸಮಿತಿ‌ ನಿರ್ಮಿಸಿ ಅದರ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ೭ ಜಿಲ್ಲೆಗಳಲ್ಲಿ ಸಂಚರಿಸಿ ಸಂಪೂರ್ಣ ಹಣ ಬಳಸಿಕೊಂಡು ಹೆಚ್ಚುವರಿಯಾಗಿ ಅನುದಾನ ತರಲಾಗುವದು ಎಂದು
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಬಿ. ಶ್ರೀರಾಮುಲು ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದರು.
ತಮ್ಮ ಇಲಾಖೆಯಿಂದ ೬೦ ಕೋಟಿ ರೂ ವೆಚ್ಚದಲ್ಲಿ ವಿವಿಧ ಗ್ರಾಮಗಳಲ್ಲಿ ವಸತಿ ನಿಲಯ, ವಸತಿ ಶಾಲೆ‌ ನಿರ್ಮಿಸಲಾಗಿದೆ. ಅವುಗಳನ್ನು ಲೋಕಾರ್ಪಣೆ ಮಾಡುವದಾಗಿ ತಿಳಿಸಿದರು.
೩೭೧ ಜೆ ಕಾಲಂ ಅನುಷ್ಠಾನದ ಆಧಾರದ ಮೇಲೆ ನೇಮಕಾತಿಯಲ್ಲಿ
ಕೆಲ ಕಡೆ ತಾಂತ್ರಿಕ ತೊಂದರೆ ಇರುವದು ಗಮನಕ್ಕೆ ಬಂದಿದ್ದು ಅವುಗಳ ಪರಿಹಾರಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಹೊರತು ಪಡಿಸಿ ಈ ಭಾಗದ ಅಭ್ಯರ್ಥಿಗಳು ಬೇರೆ ಕಡೆ ನೇಮಕಾತಿ ಹೊಂದಲು ಶೇ.೮ ರಷ್ಟು ಅವಕಾಶವಿದೆ. ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಕೊರ್ಟ ಸೂಚನೆ ನೀಡಿದ್ದು ಅದರಂತೆ ನೇಮಕಾತಿಗೆ ಅವಕಾಶ ಮಾಡಿಕೊಡುವದಾಗಿ ಬಿ.ಶ್ರೀರಾಮುಲು ತಿಳಿಸಿದರು.
ಪ್ರತಾಪಗೌಡ ಪಾಟೀಲಗೆ ಹುನ್ನತ ಹುದ್ದೆ ನೀಡುವ ಚಿಂತನೆ‌ ಇದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು‌ ಮೊದಲ‌ ಕರಣಿಕ ಕರ್ತರು ಪ್ರತಾಪಗೌಡ ಪಾಟೀಲ. ಆದರೆ ಉಪ ಚುನಾವಣೆಯಲ್ಲಿ ಸೋಲಬಾರದಿತ್ತು. ಅವರಿಗೆ ದೊಡ್ಡ ಹುದ್ದೆ ಕೊಡಿಸಲು ವಿಧಾನ ಪರಿಷತ್ ಅಥವಾ ಯಾವುದಾದರು ನುಗಮಕ್ಕೆ ನೇಮಿಸಲು ನಾನು ಶಕ್ತಿ‌ ಮೀರಿ ಪ್ರಯತ್ನಿಸುವೆ ಎಂದು ಬಿ.ಶ್ರೀರಾಮುಲು ತಿಳಿಸಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ, ಬಿಜೆಪಿ ಮುಖಂಡರಾದ ಬಸವಂತರಾಯ ಕುರಿ, ಡಾ.ಶಿವಶರಣಪ್ಪ ಇತ್ಲಿ, ಶರಣಬಸವ ವಕೀಲ, ಶರಣಯ್ಯ ಸೊಪ್ಪಿಮಠ ಹಾಗೂ ಇತರರು‌  ಇದ್ದರು

Don`t copy text!