ಪತ್ರಕರ್ತರಿಗೆ ಮಾಹಿತಿ ನೀಡದ PWD ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ಡಿ.ಎಸ್.ಹೊಲಗೇರಿ .
e-ಸುದ್ದಿ ಲಿಂಗಸುಗೂರು
ರಾಯಚೂರು ಬೆಳಗಾವಿ ರಾಜ್ಯ ಹೆದ್ದಾರಿಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಅಂದಾಜು 5 ಕೋಟಿ ರೂ ಮೊತ್ತದ ರಸ್ತೆ ಕಾಮಗಾರಿಯ ಸರಿಯಾದ ಮಾಹಿತಿ ಅಂದಾಜು ಪ್ರತಿಯನ್ನು ಪತ್ರಕರ್ತರಿಗೆ ಹಾಗೂ ಪುರಸಭೆ ಸದಸ್ಯರಿಗೆ ನೀಡದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಇಂಜಿನಿಯರ್ ಪ್ರಕಾಶ ರವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕಂಡು ಬಂದಿತು.
ಮುದಗಲ್ ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿಗಾಗಿ ಶಾಸಕ ಡಿ ಎಸ್ ಹೂಲಗೇರಿ ಅನುದಾನ ತಂದು ಕಾಮಗಾರಿಗೆ ಉದ್ಘಾಟನೆ ಮಾಡಿ ಕಾಮಗಾರಿ ಕೂಡ ಪ್ರಾರಂಭವಾಗಿದೆ ಆದರೆ ಲೋಕೋಪಯೋಗಿ ಇಲಾಖೆ ಇಂಜಿನೀಯರ್ ಪ್ರಕಾಶ ರವರು ಪತ್ರಕರ್ತರಿಗೆ ಹಾಗೂ ಪುರಸಭೆ ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೆ ಈ ರಸ್ತೆ ಅಗಲೀಕರಣ ನಿಗಿದಿ ಪಡಿಸುವ ಸಭೆಯಲ್ಲಿ ಶಾಸಕರಿಗೆ ಹಾಗೂ ಸಭೆಗೆ ತಪ್ಪು ಮಾಹಿತಿ ಹೇಳುವ ಮೂಲಕ ಎಲ್ಲರ ದಿಕ್ಕು ತಪ್ಪಿಸುವ ಕೆಲಸ ಲೋಕೋಪಯೋಗಿ ಇಲಾಖೆ ಇಂಜಿನೀಯರ್ ಮಾಡುತ್ತಿದ್ದಾರೆ ಎಂದು ಪತ್ರಕರ್ತರು ಹಾಗೂ ಪುರಸಭೆ ಸದಸ್ಯರು ತಮ್ಮ ಆಕ್ರೋಶ ಹೊರಹಾಕಿದರು.
ಈ ಸಭೆಯ ಅಧ್ಯಕ್ಷೆತೆಯನ್ನು ಪುರಸಭೆ ಅಧ್ಯಕ್ಷೆ ಅಮೀನಾ ಬೇಗಂ ಬಾರಿಗಿಡದ, ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ ಪಾಷಾ, ಮುಖ್ಯಾಧಿಕಾರಿ ಮರಿಲಿಂಗಪ್ಪ ಸದಸ್ಯರಾದ ಮೈಹಿಬೂಬಸಾಬ ಕಡ್ಡಿಪುಡಿ, ಹನುಮಂತ ನಾಯಕ, ಫಕೀರಪ್ಪ ಕುರಿ ಹಾಗೂ ಸದಸ್ಯರು ಸೇರಿದಂತೆ ಪುರಸಭೆ ಸದಸ್ಯರು ಇದ್ದರು.