ಅಂತರ್ ಗಾಡಿಯಲಿ ಹೋಗೋಣ

ಅಂತರ್ ಗಾಡಿಯಲಿ ಹೋಗೋಣ

ಬನ್ನಿ ಬನ್ನಿ ಮಕ್ಕಳೇ
ನಮ್ಮೂರಿನ ಬೆಟ್ಟಕೆ
ಕೈಯ ಮುಗಿದು ನಮಿಸೋಣ
ಎರಡನೇ ಶ್ರೀಶೈಲಕೆ ||

ನಮ್ಮೂರಿನ ಶಿಖರವದು
ಅಷ್ಟು ಮೇಲೆ ಎತ್ತರ
ನಲಿನಲಿಯುತ ನಾವ್
ಹೋಗೋಣ ಆಕಾಶದ ಹತ್ತಿರ ||

ಅಲ್ಲಿಂದಲೆ ನೋಡೋಣ
ನಮ್ಮೂರಿನ ಸೊಬಗನು
ಭೂಮಿಯೊಡನೆ ಆಕಾಶ
ಕೂಡಿದಾ ಪರಿಯನು ||

ಅಲ್ಲಿ ನೋಡು ಆಕಾಶ
ಇಲ್ಲಿ ನೋಡು ಆಕಾಶ
ಮೇಲೆ ನೋಡು ಆಕಾಶ
ಕೆಳಗಿಹುದೂ ಆಕಾಶ ||

ಸೂರ್ಯನನ್ನು ಸುತ್ತುತಿರುವ
ಭೂಮಿ ದುಂಡು ಬಂಡಿಯು
ನಮ್ಮನ್ನೆಂದೂ ಬೀಳಿಸದಿರೊ
ಸುಂಯ್ ಅಂತರ್ ಗಾಡಿಯು ||

ದಣಿವರಿಯದು ಸದ್ದಿಲ್ಲದೆ
ಸೂರ್ಯನನ್ನು ಸುತ್ತಿಯು
ಇದು ಕಾರಣ ನಮಗು ನಿಮಗು
ದಿನವು ಹಗಲು ರಾತ್ರಿಯು ||

ಸೂರ್ಯನ ಸಂಸಾರದಲ್ಲಿ
ಜೀವವೆಲ್ಲೂ ಇಲ್ಲ
ಇರುವುದಿಲ್ಲೆ ಜೀವರಾಶಿ
ಸಂಶಯ ಬೇಕಿಲ್ಲ ||

ಸೋಜಿಗದ ನಮ್ಮ ಧರೆಯು
ನಮ್ಮ ಹೆಮ್ಮೆ ಹಿಗ್ಗು
ಕಾಪಾಡುವೆವು ಅದನು ನಾವು
ನಮಗಿಲ್ಲೆಂದೂ ಕುಗ್ಗು ||

✍️ ಆದಪ್ಪ ಹೆಂಬಾ ಮಸ್ಕಿ

Don`t copy text!