ಮುದಗಲ್ ಪಟ್ಟಣ ಅಭಿವೃದ್ಧಿಗೆ ಪಕ್ಷಾತೀತವಾಗ ಶ್ರಮಿಸೋಣ ಶಾಸಕ ಹೂಲಗೇರಿ

ಮುದಗಲ್ ಪಟ್ಟಣ ಅಭಿವೃದ್ಧಿಗೆ ಪಕ್ಷಾತೀತವಾಗ ಶ್ರಮಿಸೋಣ ಶಾಸಕ ಹೂಲಗೇರಿ

e-ಸುದ್ದಿ ಲಿಂಗಸುಗೂರು

ರಾಯಚೂರು ಬೆಳಗಾವಿ ರಾಜ್ಯ ಹೆದ್ದಾರಿಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ರಸ್ತೆ ಅಗಲೀಕರಣ ವೇಳೆ ಬಡವರು ಶ್ರೀಮಂತರು ಎನ್ನದೆ ಯಾವ ಸಾರ್ವಜನಿಕರಿಗೂ ಅನ್ಯಾಯವಾಗದಂತೆ ಪಕ್ಷಾತೀತವಾಗಿ ಪುರಸಭೆ ಸದಸ್ಯರು ಒಮ್ಮತದಿಂದ ಸೇರಿ ರಸ್ತೆ ಅಗಲೀಕರಣ ಮಾಡಿ ಪಟ್ಟಣ ಅಭಿವೃದ್ಧಿಯನ್ನು ಮಾಡೋಣ ಎಂದು ಶಾಸಕ ಡಿ ಎಸ್ ಹೂಲಗೇರಿ ಹೇಳಿದರು.
ಮುದಗಲ್ ಪುರಸಭೆ ಕಾರ್ಯಾಲಯದ ಸಭಾಗಂಣದಲ್ಲಿ ಪಟ್ಟಣದ ರಸ್ತೆ ಅಗಲೀಕರಣದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಹೇಳಿದರು,
ಕಳೆದ ಬಾರಿ ರಸ್ತೆ ಅಗಲೀಕರಣ ವೇಳೆ ಮನೆ ಕಳೆದುಕೊಂಡ ನೊಂದ ಕುಟುಂಬಗಳಿಗೆ ಸರಕಾರದ ಸೌಲಭ್ಯ ಒದಗಿಸಲು ಪುರಸಭೆ ವತಿಯಿಂದ ಹಾಗೂ ನಾನು ಸೇರಿ ಮೊದಲ ಆದ್ಯತೆ ನೀಡಲಾಗುವದು ಎಂದು ಇದೇ ಸಂದರ್ಭದಲ್ಲಿ ಶಾಸಕ ಹೇಳಿದರು.
ರಸ್ತೆ ಅಗಲೀಕರಣವನ್ನು 48 ಫಿಟ್ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅಮೀನಾ ಬೇಗಂ ಬಾರಿಗಿಡ, ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ ಪಾಷಾ, ಸದಸ್ಯರಾದ ಮೈಹಿಬೂಬಸಾಬ ಕಡ್ಡಿಪುಡ್ಡಿ, ಹನುಮಂತ ನಾಯಕ, ಫಕೀರಪ್ಪ ಕುರಿ, ಸದಸ್ಯರು ಸೇರಿದಂತೆ ಪುರಸಭೆ ಸಿಬ್ಬಂದಿ ಸೆರಿದಂತೆ ಇತರರು ಹಾಜರಿದ್ದರು.

Don`t copy text!