ಬಿಜೆಪಿ ಕಾಂಗ್ರೆಸ್ ಗೆ ಅಸಮಾದಾನದ ಬಿಸಿ – ವಿಜಯಮಾಲೆ ಯಾರ ಕೊರಳಿಗೆ ?

ಬಿಜೆಪಿ ಕಾಂಗ್ರೆಸ್ ಗೆ ಅಸಮಾದಾನದ ಬಿಸಿ – ವಿಜಯಮಾಲೆ ಯಾರ ಕೊರಳಿಗೆ ?

ದಿವಂಗತ ಸಿ.ಎಂ.ಉದಾಸಿಯ ಕುಟುಂಬಕ್ಕೆ ಟಿಕೆಟ್ ಕೈತಪ್ಪಿದಕ್ಕೆ ಬಿಜೆಪಿ ಕಾರ್ಯಕರ್ತರ ಆಕ್ರೋಶವೋ !
ಎರಡೂ ಪಕ್ಷದಲ್ಲಿದೆ ಕಾರ್ಯಕರ್ತರ ಅಸಮಾಧಾನವೂ..!!

ಈ ಇಬ್ಬರಲ್ಲಿ ಯಾರು ಗೆದ್ದರೂ ಅದು ಕೂದಲೆಳೆಯ ಹಂತರದಲ್ಲೂ..!!!

ಹಾನಗಲ್ ಬೈಎಲೆಕ್ಷನ್ ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಆಂತರಿಕ ಬಂಡಾಯದ ಬಿಸಿ ದೊಡ್ಡ ತಲೆನೋವಾಗಿದೆ. ದಿವಂಗತ ಸಿಎಂ ಉದಾಸಿ ಕುಟುಂಬಕ್ಕೆ ಟಿಕೆಟ್ ಕೈತಪ್ಪಿದ್ದು ಕಾರ್ಯಕರ್ತರ ಆಕ್ರೋಶನಕ್ಕೆ ಕಾರಣವಾಗಿದೆ. ಈ ಅಸಮಾಧಾನ ಚುನಾವಣೆಯ ಮೇಲೆ ಬೀರುತ್ತಾ ಪರಿಣಾಮ?

ಹಾನಗಲ್ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್.

ಕಾಂಗ್ರೆಸ್ ಗೂ ಆಂತರಿಕ ಬಂಡಾಯದ್ದೇ ಭಯವೂ.

ಉದಾಸಿ ಕುಟುಂಬದ ಅಸಮಾಧಾನ ಬೀರುತ್ತಾ ಪರಿಣಾಮ?–

ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆ ಇದೀಗ ಎಲ್ಲರ ಕೇಂದ್ರ ಬಿಂದುವಾಗಿದೆ. ಕಾರಣ ದಿವಂಗತ ಸಿಎಂ ಉದಾಸಿ ಅವರ ಕುಟುಂಬಕ್ಕೆ ಟಿಕೆಟ್ ಕೈತಪ್ಪಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಹೌದು, ಹಾನಗಲ್‌ನಲ್ಲಿ ರೇವತಿ ಉದಾಸಿ ಅವರಿಗೆ ಬಹುತೇಕ ಟಿಕೆಟ್ ಫೈನಲ್ ಆಗಿದೆ ಎಂದೇ ಇತ್ತು. ಆದರೆ ಕೊನೆಯಗಳಿಗೆಯಲ್ಲಿ ಎಲ್ಲವೂ ಬದಲಾಗಿದೆ. ಮಾಜಿ ಶಾಸಕ ಶಿವರಾಜ್ ಸಜ್ಜನರ್‌ ಗೆ ಟಿಕೆಟ್‌ ನೀಡಲಾಗಿದೆ. ಸಹಜವಾಗಿ ಇದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದ ಈ ನಿರ್ಧಾರ ಚುನಾವಣೆಯ ಮೇಲೂ ಪರಿಣಾಮ ಇದು ಬೀರುವ ಸಾಧ್ಯತೆಯೂ ದಟ್ಟವಾಗಿದೆ.

ಇತ್ತೀಚಿನ ವರೆಗೂ ಹಾನಗಲ್‌ನಲ್ಲಿ ರೇವತಿ ಉದಾಸಿ ಅವರೇ ಪಕ್ಷದ ಅಭ್ಯರ್ಥಿ ಎಂಬ ವಾತಾವರಣ ಇತ್ತು. ಆದರೆ ದಿಢೀರ್ ಆಗಿ ಎಲ್ಲವೂ ಬದಲಾಗಿದೆ. ರೇವತಿ ಉದಾಸಿ ಬದಲಾಗಿ ಹಾವೇರಿಯ ಮಾಜಿ ಶಾಸಕ ಶಿವರಾಜ್ ಸಜ್ಜನರ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದ್ದಾರೆ. ದಿ.ಸಿ.ಎಂ.ಉದಾಸಿ ಅವರ ಸಮಾಧಿಯ ಎದುರು ಹಲವು ಕಾರ್ಯಕರ್ತರು ಮೌನ ಪ್ರತಿಭಟನೆಯನ್ನು ನಡೆಸಿದ್ದಾರೆ.

ಜೊತೆಗೇ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಯ ಬೆದರಿಕೆಯನ್ನು ಒಡ್ಡಿದ್ದರು. ಸಹಜವಾಗಿ ಇವೆಲ್ಲವೂ ಚುನಾವಣೆಯ ಮೇಲೆ ಪರಿಣಾಮ ಬೀರಲಿವೆ. ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಕುಟುಂಬ ರಾಜಕೀಯದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಹಾಗಾಗಿಯೇ ಸಿ.ಎಂ.ಉದಾಸಿಯವರ ಕುಟುಂಬದ ಸದಸ್ಯರಾದ ರೇವತಿ ಉದಾಸಿಯವರಿಗೇ ಬಿಜೆಪಿಯ ಟಿಕೆಟ್ ನೀಡುವ ಉದ್ದೇಶ ಹೊಂದಿದೆ ಬಿಜೆಪಿ ಎಂದು ನಂಬಲಾಗಿತ್ತು. ಆದರೆ ರೇವತಿ ಉದಾಸಿ ಬದಲಾಗಿ ಈಗ ಹಾವೇರಿಯ ಶಿವರಾಜ ಸಜ್ಜನರಗೆ ಟಿಕೆಟ್ ನೀಡಲಾಗಿದೆ. ಆದರೆ ಇದು ಇದೀಗ ಕಾರ್ಯಕರ್ತರ ಪ್ರತಿಭಟನೆ, ಅಸಮಾಧಾನಕ್ಕೆ ಕಾರಣವಾಗಿದೆ.

ಇದು ಶಿವರಾಜ ಸಜ್ಜನರ ಪಾಲಿಗೆ ಕಹಿಯಾಗಿ ಪರಿಣಮಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ.

ಈ ನಡುವೆ ಕಾಂಗ್ರೆಸ್‌ನಲ್ಲೂ ಮಹೋಹರ್ ತಹಶೀಲ್ದಾರ್ ಬಂಡಾಯವಿತ್ತು. ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಹುಬ್ಬಳ್ಳಿಯ ಶ್ರೀನಿವಾಸ್‌ ಮಾನೆಗೆ ಟಿಕೆಟ್‌ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪಕ್ಷದ ಪ್ರಮುಖರು ಅವರ ಜೊತೆಗೆ ಮಾತುಕತೆ ನಡೆಸಿ ಅಸಮಾಧಾನ ಶಮನಕ್ಕೆ ಪ್ರಯತ್ನ ನಡೆಸಿದ್ದರು. ಹೀಗಿದ್ದರೂ ಶ್ರೀನಿವಾಸ್ ಮಾನೆ ಜೊತೆಗೆ ಪ್ರಚಾರ ಮಾಡುವುದಿಲ್ಲ ಎಂಬ ನಿರ್ಧಾರವನ್ನೂ ಮನೋಹರ ತಹಶೀಲ್ದಾರ್ ಪ್ರಕಟಿಸಿದ್ದಾರೆ. ಈಗ ಹಾಗೆಯೇ ಮಾಡಿದ್ದಾರೆ ಕೂಡ. ಈಗ ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಆಂತರಿಕ ಬಂಡಾಯದ ಬಿಸಿ ಮುಟ್ಟುವ ಸಾಧ್ಯತೆಯೂ ಇದೆ.

ಇದೆಲ್ಲರ ನಡುವೆಯ ಹಾನಗಲ್ಲ ವಿಧಾನ ಸಭಾ ಕ್ಷೇತ್ರ ಸಮೀಕ್ಷೆಯು ಹೀಗಿದೆ ನೋಡಿ.! —

ಹಾನಗಲ್ ವಿಧಾನಸಭಾ ಕ್ಷೇತ್ರ ಹಾವೇರಿ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಕಣವಾಗಿದೆ ಈಗ.

ಅರೆಮಲೆನಾಡು ಪ್ರದೇಶವಾಗಿದ್ದರೂ, ಬಿಸಿಲು ಮಾತ್ರ ತಪ್ಪಿದ್ದಲ್ಲ. ಸ್ಥಳೀಯ ಕಮಲ ಅಭ್ಯರ್ಥಿಗೆ ಅನ್ಯ ಜಿಲ್ಲೆಯ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಪ್ರತಿಸ್ಪರ್ಧಿಗಳಾಗಿ ಸೆಣಸಾಟಕ್ಕೆ ಸಿದ್ಧರಾಗಿದ್ದಾರೆ ಈಗ. ಪ್ರಚಾರ ಭರಾಟೆಯಲ್ಲಿ ನರೇಂದ್ರ ಮೋದಿ ಮತ್ತು ರಾಗಾ ಹವಾ ಬದಲು ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸೇ ಕುತೂಹಲ ಕೆರಳಿಸಿದೆ.

ಹಾನಗಲ್ಲ ವಿಧಾನಸಭಾ ಕ್ಷೇತ್ರ–

ಹಾವೇರಿ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಕಣವಾದ, ಅರೆಮಲೆನಾಡು ಪ್ರದೇಶವಾಗಿದ್ದರೂ, ಬಿಸಿಲು ಮಾತ್ರ ತಪ್ಪಿಲ್ಲ. ಸ್ಥಳೀಯ ಕಮಲ ಅಭ್ಯರ್ಥಿಗೆ ಅನ್ಯ ಜಿಲ್ಲೆಯ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಪ್ರತಿಸ್ಪರ್ಧಿಗಳಾಗಿ ಸೆಣಸಾಟಕ್ಕೆ ಸಿದ್ಧರಾಗಿದ್ದಾರೆ. ಪ್ರಚಾರ ಭರಾಟೆಯಲ್ಲಿ ಮೋದಿ ಮತ್ತು ರಾಗಾ ಹವಾ ಬದಲು ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಕುತೂಹಲ ಕೆರಳಿಸಿದೆ ಎಂದು ಮತ್ತೊಮ್ಮೆ ಹೇಳುತ್ತೇನೆ.

ಪಕ್ಷೇತರ ಅಭ್ಯರ್ಥಿಯಾಗಿ 1983 ರಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿರುವ ಮಾಜಿ ಸಚಿವ ಸಿ.ಎಂ.ಉದಾಸಿ ಕಮಲ ಪಕ್ಷದ ಅತ್ಯಂತ ಹಿರಿಯ ಮುತ್ಸದ್ದಿಯಾಗಿದ್ದರು. ಈ ವರೆಗೆ 5 ಬಾರಿ ಗೆದ್ದು, 3 ಬಾರಿ ಸೋಲು ಕಂಡು, ಇದೀಗ 9 ನೇ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದರಿನೋ, ಆದರೆ ಅವರು ಈಗ ತೀರಿದ್ದಾರೆ. ಹಾಗೆಯೇ ತೆರುವಾದ ಅವರ ಸ್ಥಾನಕ್ಕೆ ಪೈಪೋಟಿ ನಡೆದಿದೆ ಇದೀಗ.

ಸಾಂಪ್ರದಾಯಿಕ ಎದುರಾಳಿಯಾಗಬೇಕಿದ್ದ ಶಾಸಕ ಮನೋಹರ ತಹಶೀಲ್ದಾರಗೆ ಟಿಕೆಟ್‌ ಕೈ ತಪ್ಪಿದ ಕಾರಣ ಶ್ರೀನಿವಾಸ ಮಾನೆಯವರನ್ನೇ ಅವರನ್ನೇ ಕಾಂಗ್ರೆಸ್‌ ಅಭ್ಯರ್ಥಿಯಾಗಿಸಿದ್ದಾರೆ

ಜಾತಿ ಲೆಕ್ಕಾಚಾರ

ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ವಿಶೇಷವಾಗಿದೆ ಈಗ. ಅಲ್ಪಸಂಖ್ಯಾತರ ಮತಗಳೇ ಇಲ್ಲಿ ನಿರ್ಣಾಯಕವಾಗಿದ್ದರೂ, ಈವರೆಗೂ ಯಾರೂ ಶಾಸಕರಾಗಿಲ್ಲ ಎನ್ನುವುದೇ ಅಚ್ಚರಿಗೆ ಕಾರಣವಾಗಿದೆ. ಬಣಜಿಗ, ಸಾದರ ಮತ್ತು ನೊಣಬ ಲಿಂಗಾಯತರ ಪಾರಮ್ಯ ಹೆಚ್ಚಾಗಿದೆ. ಮರಾಠಾ, ಗಂಗಾಮತ ಸೇರಿ ಬ್ರಾಹ್ಮಣರ ಜೊತೆಗೆ ಹಿಂದುಳಿದ ವರ್ಗಗಳ ಮತಗಳ ಸಂಖ್ಯೆ ಪರಿಗಣಿಸಲ್ಪಡುತ್ತವೆ.

ರಾಜಕೀಯ ಇತಿಹಾಸ

1978 ರಿಂದ 2013 ರ ವರೆಗೆ ಬಣಜಿಗ ಸಮಾಜದ ಸಿ.ಎಂ.ಉದಾಸಿ ಮತ್ತು ಬಲಿಜ ಸಮಾಜದ ಮನೋಹರ ತಹಶೀಲ್ದಾರ ಈ ಇಬ್ಬರೂ ಹಿರಿಯ ನಾಯಕರನ್ನು ಹೊರತುಪಡಿಸಿ ಮತ್ತಾರಿಗೂ ಕ್ಷೇತ್ರದ ಮತದಾರರು ಮಣೆ ಹಾಕಿರಲಿಲ್ಲ ಈ ಹಿಂದೆ. ಈಗ ಎರಡನೇ ಬಾರಿಗೆ ಅನ್ಯ ಜಿಲ್ಲೆಗಳ ನವ ಯುವಕರು ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್‌ ಪಾಳೆಯದಲ್ಲಿ ಹೊಸ ಮುಖ ಬೇಕೆನ್ನುವ ಬೇಡಿಕೆಗೆ ಹೈಕಮಾಂಡ್‌ ಅನ್ಯ ಜಿಲ್ಲೆಯ ಅಂದರೆ ಧಾರವಾಡ ಜಿಲ್ಲೆಯ ಶ್ರೀನಿವಾಸ ಮಾನೆ ಅವರಿಗೆ ಅಸ್ತು ಎಂದು ಅವಕಾಶ ಕೊಟ್ಟಿದೆ. ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುವ ಜೊತೆಗೆ ಇಲ್ಲಿಯ ಅಹಿಂದ ಮತಗಳನ್ನು ಸೆಳೆಯುವ ತಂತ್ರಗಾರಿಕೆ ಉದ್ದೇಶದಿಂದ ಜೆಡಿಎಸ್‌ ಬೊಮ್ನಳ್ಳಿ ಬಾಬು ಅವರಿಗೆ ಟಿಕೆಟ್‌ ನೀಡಿದೆ.

 ಕೈ-ಕಮಲ ಜಟಾಪಟಿಯೂ..!

ಕ್ಷೇತ್ರದ ಮತದಾರರ ಪ್ರಕಾರ, ಆರಂಭದಿಂದಲೂ ಒಮ್ಮೆ ಸಿ.ಎಂ.ಉದಾಸಿಯವರನ್ನು ಮತ್ತು ಮನೋಹರ ತಹಶಿಲ್ದಾರರನ್ನು ಹೀಗೆಯೇ ಆಯ್ಕೆ ಮಾಡಿಕೊಂಡು ಬರುವ ಸಂಪ್ರದಾಯ ರೂಢಿಸಿಕೊಂಡು ಬರಲಾಗಿದೆ. ಕಳೆದೆರಡು ಭಾರಿಯಿಂದ ಮನೋಹರ ತಹಶೀಲ್ದಾರ ಬದಲು ಹುಬ್ಬಳ್ಳಿಯ ಶ್ರೀನಿವಾಸ ಮಾನೆಯವರನ್ನೇ ಪಕ್ಷದ  ಕಣಕ್ಕಿಳಿಸಿದ್ದರು.

ಜೆಡಿಎಸ್‌ ಕ್ಷೇತ್ರದಲ್ಲಿ ಇನ್ನೂ ನೆಲೆ ಕಂಡುಕೊಳ್ಳಬೇಕಿದೆ. ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಇದೆ.

ಒಟ್ಟು ಮತದಾರರು 1,90,669

ಪುರುಷ ಮತದಾರರು 1,00,172

ಮಹಿಳಾ ಮತದಾರರು 90,497

ಹೀಗೆಯೇ ಹಾನಗಲ್ಲ ಕ್ಷೇತ್ರದ ಜನರಿದ್ದಾರೆ, ಮತ್ತೂ ಮತಗಳಿವೆ. ಅವೆಲ್ಲವೂ ಕಾಂಗ್ರೆಸ್ ನ ಶ್ರೀನಿವಾಸ ಮಾನೆಯವರನ್ನೇ ಗೆಲ್ಲಿಸುವ ಇರಾದೆಯಲ್ಲಿವೆ.

ಕ್ಷೇತ್ರದ ಇಶ್ಯೂಸ್‌

ಕೈಗಾರಿಕೆ, ಶಾಶ್ವತ ನೀರಾವರಿ, ಮಾವು ಸಂಸ್ಕರಣಾ ಕೇಂದ್ರ, ಪ್ರವಾಸಿ ತಾಣವಾಗಿ ಅಭಿವೃದ್ಧಿ.

ಈ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳಾಗಿವೆ, ಜರೂರಾಗಿ. ಉಳಿದಂತೆ ಇನ್ನುಳಿದ ಕೆಲಸಗಳೂ ಆಗಬೇಕಾದೆ.

ವರದಿ- ಕೆ.ಶಿವು.ಲಕ್ಕಣ್ಣವರ

(ಇಲ್ಲಿ ಪ್ರಕಟವಾಗುವ ವರದಿ, ಲೇಖನಗಳಿಗೆ ಆಯಾ ಲೇಖಕರೇ ಹೊಣೆಗಾರರು-ಸಂಪಾದಕ)

Don`t copy text!