ಅರಿವೆ ಅರ್ಪಿತ, ಮರವೆ ಅನರ್ಪಿತ

ಅರಿವೆ ಅರ್ಪಿತ, ಮರವೆ ಅನರ್ಪಿತ

ಅರಿವಿನ ಕುಳವನರಿಯೆ, ಮರಹಿನ ತೆರನನರಿಯೆ.ಅರಿವು,‌ಮರಹಗಳಿದ ಗವರೇಶ್ವರಲಿಂಗಕ್ಕೆ ಅರಿವೆ ಅರ್ಪಿತ, ಮರವೆ ಅನರ್ಪಿತ ಮೊರನ ಹೆಣೆವ ಗೌರ ನಾನೆತ್ತ ಬಲ್ಲನಯ್ಯಾ
                      -ಮೇದಾರ ಕೇತಯ್ಯ ಶರಣರು

ಅರಿವಿನ ಕುಳವನರಿಯ, ಮರಹಿನ ತೆರನನರಿಯೆ

ಮನುಷ್ಯನಿಗೆ ಅರಿವು ಮತ್ತು‌ ಮರವು ಎರಡು ಒಟ್ಟೊಟ್ಟಿಗೆ ಇರುವ ಸಾಧನಗಳು. ಲೌಕಿಕ‌ ಜೀವನದಲ್ಲಿ ಅರಿವು ತುಂಬಾ ಪ್ರಾಮುಖ್ಯತೆಯನ್ನು ಪಡೆದರೇ ಮರವು ಹಳ ಹಳಿಸುತ್ತಿರುತ್ತದೆ. ಒಮ್ಮೊಮ್ಮೆ ಮರವು ನಮಗೆ ವರವು ಆಗುತ್ತದೆ.
ಆದರೆ ಇಲ್ಲಿ‌ ಕೇತಯ್ಯ ಶರಣರ ವಿಚಾರಧಾರೆ ವಿನಯವನ್ನು, ಮುಗ್ದತೆಯನ್ನು ತೊರಿಸುತ್ತದೆ. ಅವರೇ ಹೇಳುವಂತೆ ಅರಿವು ಮರುವು ಈ ಎರಡರ ಕುರಿತು ನನಗೆ ಸರಿಯಾಗಿ ತಿಳಿಯದು. ಅರಿವಿನ ವಿಚಾರ , ಅರಿವಿನ ಮಹತ್ವ ಶ್ರೇಷ್ಠತೆಯು ನನಗೆ ತಿಳಿಯದು. ಮರುವುನ ಹಿನ್ನಲೆಯು ತಿಳಿಯದು. ನಾನು ಅಲ್ಪ. ನಾನೊಬ್ಬ ಸಣ್ಣ ಕೆಲಸ ಮಾಡುವ ಕೆಲಸಗಾರ. ನನ್ನಿಂದ ಅರಿವಿನ ರಹಸ್ಯ ಮರುವುವಿನ ಭಯ ಎರಡು ತಿಳಿಯದೆ ಹೋದೆ.

ಅರಿವು, ಮರಹಳಿದು ಗವರೇಶ್ವರಲಿಂಗಕ್ಕೆ ಅರಿವೆ ಅರ್ಪಿತ, ಮರವೆ ಅನರ್ಪಿತ

ಅರಿವು ಆತ್ಮವನ್ನು ತೊರಿಸುತ್ತದೆ. ಮರುವು ತನ್ನನ್ನು ಮರೆಸುತ್ತದೆ. ಅರಿವು, ಮರುಹು ಎರಡು ಗವರೇಶ್ವರಲಿಂಗಕ್ಕೆ ತಿಳಿದಿದೆ. ಗವೇಶ್ವರಲಿಂಗದಲ್ಲಿ ಒಂದಾಗುವ ಪರಿಯಿಂದ ಅರಿವು‌ ಮಾತ್ರ ಅರ್ಪಿತವಾಗಿ ಮರುಹು ಅರ್ಪಿತವಾಗಲಾರದು ಎನ್ನುತ್ತಾರೆ.

ಮೊರನ ಹೆಣೆವ ಗೌರ, ನಾನೆತ್ತ ಬಲ್ಲನಯ್ಯಾ

ಮೊರಗಳನ್ನು (ಮೊರ- ದವಸಗಳನ್ನು ಸ್ವಚ್ಛ ಮಾಡುವ ಬಿದರಿನ ಸಾಧನ ಮೊರ) ಹೆಣೆದು, ಅವುಗಳನ್ನು ಮಾರಿ ನನ್ನ ಹೊಟ್ಟೆ ತುಂಬಿಸಿಕೊಳ್ಳುವ ನಾನೊಬ್ಬ ಕಾಯಕ ಜೀವಿ. ನನಗೆ ಗವರೇಶ್ವರಲಿಂಗಕ್ಕೆ ಅರ್ಪಿತನಾಗುವುದು ಬಿಟ್ಟರೆ ಬೇರೊಂದು ಗೊತ್ತಿಲ್ಲ. ಅರಿವಿನ ಗಹನವಾದ ರಹಸ್ಯ ವಿಷಯಗಳು ತಿಳಿದಿದೆ ಎಂದರೆ ಅಹಂಕಾರವಾಗುತ್ತದೆ ಎಂಬ ಕಾರಣಕ್ಕೆ ಅರಿವು‌-ಮರುಹು ನಾನರಿಯೆ ಎಂದು ಕೇತಯ್ಯನವರು ವಿನಿತರಾಗುತ್ತಾರೆ.

Don`t copy text!