ಡಾಕ್ಟರ್ ಜಯಲಕ್ಷ್ಮಿ ಮಂಗಳಮೂರ್ತಿ ಯವರಿಗೆ ರಾಜ್ಯೋತ್ಸವ ಪ್ರಶಸ್ತಿ.
e-ಸುದ್ದಿ ಮಸ್ಕಿ
ದಾಸ ಸಾಹಿತ್ಯದ ಹಿರಿಯ ವಿದ್ವಾಂಸರು, ಉತ್ತಮ ವಾಗ್ಮಿಗಳಾದ ರಸಯಚೂರಿನ ಶೃತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾಕ್ಟರ್ ಜಯಲಕ್ಷ್ಮಿ ಮಂಗಳಮೂರ್ತಿ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಅವರು ಜಿಲ್ಲೆಯ ಹಿರಿಯ ಲೇಖಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದಾರೆ. ಸದ್ದಿಲ್ಲದೆ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಅವರಿಗೆ ರಾಜ್ಯೊತ್ಸವ ಪ್ರಶಸ್ತಿ ದೊರಕಿರುವದಕ್ಕೆ e-ಸುದ್ದಿ ಸಂಪಾದಕ ವೀರೇಶ ಸೌದ್ರಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ, ಸಾಹಿತಿ ಗುಂಡುರಾವ್ ದೇಸಾಯಿ, ತಾಲೂಕು ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಪತ್ರಕರ್ತ ಪ್ರಕಾಶ ಮಸ್ಕಿ ಅಭಿನಂದಿಸಿದ್ದಾರೆ.