ದೀಪಾವಳಿ

ದೀಪಾವಳಿ

ಜಗಮಗಿಸುವ ದೀಪದ
ಬೆಳಕಿನ ದೀಪಾವಳಿಯಲ್ಲಿ
ಮನದ ಮೂಲೆಯಲಿ ಅವಿತಿರುವ ಕತ್ತಲೆಯ ಕಳೆಯೊಣ….!
ಬಾನತುಂಬಾ ಬೆರಗು ಮುಡಿಸುವ ಬಿರುಸು ಬಾಣಗಳ ತೆರದಿ ಮಾತುಗಳು ಯಾರ ಎದೆಯ ತಿವಿಯದು ನಭಕೆ ನುಗ್ಗಿ ನಗುವ ಜ್ವಾಲೆಗಳಾಗದಿರಲಿ….!
ಸಿಡಿಮದ್ದಿನಲಿ ಸದ್ದು ಮಾಡುವ
ಸೊಕ್ಕಿನ ಪಟಾಕಿಗಳು ಕಿವಿಗಡಚಿಕ್ಕದಿರಲಿ….!
ಬೆಳಕು ಕೊಂಡುಕೊಳ್ಳುವ ಶ್ರೀಮಂತಿಕೆಯ ಅಲಂಕಾರಗಳು
ಅಹಂಕಾರದ ಪ್ರತಿಕವಾಗದಿರಲಿ….!
ಎಣ್ಣೆಯಿಲ್ಲದೆ ಬೆಳಗುವ ಸಾಲು
ಸಾಲು ಹಣತೆಗಳು ಮಾನವನೆದೆ ದೀಪಗಳು..!
ಸುತ್ತಲಾವರಿಸಿದ ಕತ್ತಲಕಳೆಯಲು ಸಾಕು ದೇವರಮುಂದಿನ ನಂದಾದೀಪ…..!
ಮನವ ಚೇತರಿಸಲು ನಿನ್ನರಿವಿನ ಕಂಗಳ ಅವಳಿದೀಪ….!
ಮನವರಳಿಸುವ ನಗುವಿನ ಸದ್ದು
ಪ್ರೀತಿ ಪ್ರೇಮ ಕರುಣೆಯ ಅಲಂಕಾರ
ಅರಿತು ಆಡುವಮಾತು
ರಾಗದ್ವೇಶಗಳಿಂದ ಮುಕ್ತವಾದ
ನಿರ್ಮಲ ಮನಸ್ಸು….!
ನಿತ್ತ್ಯವು ತರಲಿ ದೀಪಾವಳಿಯಸೊಗಸು….!


✍ ಡಾ.ನಿರ್ಮಲಾ ಬಟ್ಟಲ

One thought on “ದೀಪಾವಳಿ

  1. ಅಂಧತ್ವದ ಮನಸಿಗೆ ಬೆಳಕು ನೀಡಿತು ನಿಮ್ಮ ಈ ಕವನ… ನಿಮಗೂ ಕೂಡಾ ದೀಪಾವಳಿಯ ಹಬ್ಬದ ಶುಭಾಶಯಗಳು ಮೇಡಂ

Comments are closed.

Don`t copy text!