ಅರಿವಿನಾರತಿ

ಅರಿವಿನಾರತಿ

ದೀಪದ ಬೆಳಕಲ್ಲಿ ದೀನರ ನೋಡೋಣ
ದೀನರ ಮೊಗದಲ್ಲಿ ನಗುವ ಮೂಡಿಸೋಣ

ದೀಪದ ಬೆಳಕಲ್ಲಿ ಅಜ್ಞಾನ ಕಳೆದು
ವೈಜ್ಞಾನಿಕ ಅರಿವು ಮೂಡಿಸೋಣ

ದೀಪದ ಬೆಳಕಲ್ಲಿ ಶರಣರ ನೆನೆಯೋಣ
ಮನದ ಮರೆಯ ಮಾಯೆಯ ಕಳೆಯೋಣ

ಕಾಯಕ ಕಲಿಸಿದ ನಾಯಕಗೆ ಶರಣೆಂದು
ಅಂತರಂಗದ ಅರಿವಿನಾರತಿ ಅರ್ಪಿಸೋಣ.

ಜಗದಿ ಸೌಖ್ಯವ ಬಯಸೋಣ
ಜಗದ್ವಂದ್ಯಗೆ ನಮಿಸೋಣ.

ಸವಿತಾ. ಮಾಟೂರ. ಇಲಕಲ್ಲ

Don`t copy text!