ಅಮ್ಮ ಪ್ರಶಸ್ತಿ’ ಪ್ರಕಟ ಭೈರಮಂಗಲ ರಾಮೇಗೌಡ, ಆನಂದ ಋಗ್ವೇದಿ, ಸಂಧ್ಯಾರೆಡ್ಡಿ ಸೇರಿದಂತೆ 15 ಮಂದಿಗೆ ‘ಅಮ್ಮ ಪ್ರಶಸ್ತಿ

ಪ್ರಶಸ್ತಿ’ ಪ್ರಕಟಅಮ್ಮ

ಅಮ್ಮ ‘ಪ್ರಶಸ್ತಿ’ ಪ್ರಕಟ

ಭೈರಮಂಗಲ ರಾಮೇಗೌಡ, ಆನಂದ ಋಗ್ವೇದಿ, ಸಂಧ್ಯಾರೆಡ್ಡಿ ಸೇರಿದಂತೆ 15 ಮಂದಿಗೆ ‘ಅಮ್ಮ ಪ್ರಶಸ್ತಿ

ಈ ಬಾರಿ 15 ಜನರಿಗೆ ‘ಅಮ್ಮ ಪ್ರಶಸ್ತಿ’ಯೂ ಲಭಿಸಿದೆ.
26 ರಂದು ಸೇಡಂನಲ್ಲಿ ಈ‌ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ಗೆ ಅಥಣಿಯ ಪ್ರಭುಚೆನ್ನಬಸವ ಸ್ವಾಮೀಜಿ, ಕಾದಂಬರಿಕಾರ ಡಾ.ಭೈರಮಂಗಲ ರಾಮೇಗೌಡ, ಲೇಖಕಿ ಕಾವ್ಯಶ್ರೀ ಮಹಾಗಾಂವಕರ್, ಡಾ.ಆನಂದ ಋಗ್ವೇದಿ, ಸುನೀತಾ ಕುಶಾಲನಗರ, ಭಾರತಿ.ಬಿ.ವಿ, ಡಾ.ಅಶೋಕ ನರೋಡೆ, ಚೇತನ್ ಸೋಮೇಶ್ವರ, ಲಕ್ಷ್ಮಿ ಶಂಕರ ಜೋಶಿ, ಡಾ.ಕೆ.ಆರ್.ಸಂಧ್ಯಾರೆಡ್ಡಿ, ಡಾ.ಶ್ರುತಿ ಬಿ.ಆರ್, ನಂದಿನಿ ಹೆದ್ದುರ್ಗ, ಶ್ರೀದೇವಿ ಕೆರೆಮನೆ, ನಿರ್ಮಲಾ ಶೆಟ್ಟರ್ ಹಾಗೂ ಸಹದೇವ ಯರಗೊಪ್ಪ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ‘ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲ ರೆಡ್ಡಿ ಮುನ್ನೂರ್ ಹೇಳಿದ್ದಾರೆ.

ಡಾ.ಬೈರಮಂಗಲ ರಾಮೇಗೌಡರ ಅವರ ಕಾದಂಬರಿಯಾದ ‘ಮಾಯಾಕಿನ್ನರಿ’ಗೆ ಲಭಿಸಿದೆ.ಕಾವ್ಯಶ್ರೀ ಮಹಾಗಾಂವಕರ್ ಅವರ ಕಥೆ‌ ‘ಒಳ್ಕಲ್ ಒಡಲು’, ಡಾ.ಆನಂದ ಋಗ್ವೇದಿಯವರ ‘ಕರಕೀಯ ಕುಡಿ’ಗೆ ಮತ್ತುಸುನೀತಾ ಕುಶಾಲನಗರ ಅವರ ‘ಇಂಜೀಲಗೆರೆ ಪೋಸ್ಟ್’ ಕೃತಿಗೆ ಲಭಿಸಿದೆ.

ಭಾರತಿ.ಬಿ.ವಿ. ಅವರ ಪ್ರವಾಸ ಕಥನವಾದ ‘ನಕ್ಷತ್ರಗಳ ಸುಟ್ಟ ನಾಡಿನಲ್ಲಿ’ ಕೃತಿಗೆ ಅಲ್ಲದೇ ಡಾ.ಅಶೋಕ ನರೋಡೆ ಅವರ ಕೋಟಿ ಕೃತಿಗೆ ‘ಅಮ್ಮ ಪ್ರಶಸ್ತಿ’ ಲಭಿಸಿದೆ.

ಪ್ರಭು ಚೆನ್ನಬಸವ ಸ್ವಾಮೀಜಿ ಅಥಣಿ ಅವರ ಸಂಕೀರ್ಣ- ಮಹಾತ್ಮರ ಚರಿತಾಮೃತ ಕೃತಿಗೆ, – ಕರೋನಾ ಮುಕ್ತೆಯ ಕಥನ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರ ಕರೋನಾ ಮುಕ್ತಯ ಚೇತನ್ ಸೋಮೇಶ್ವರ ಸಂಶೋಧನೆಯಾದ ಲೋಕಾರೂಢಿಯ ಮೀರಿ, ಹಿಂದೂಸ್ತಾನಿ ಸಂಗೀತ ವಾಹಿನಿ (ಲಕ್ಷ್ಮಿ ಶಂಕರ ಜೋಶಿ), ಡಾ.ಶೃತಿ.ಬಿ.ಆರ್ ಅವರ ಕಾವ್ಯವಾದ ಜೀರೋ ಬ್ಯಾಲೆನ್ಸ್, ನಂದಿನಿ ಹೆದ್ದುರ್ಗ ಅವರ ರತಿಯ ಕಂಬನಿ, ಶ್ರೀದೇವಿ ಕೆರೆಮನೆಯವರ ಮೈಮುಚ್ಚಲೊಂದು ತುಂಡು ಬಟ್ಟೆ, ನಿರ್ಮಲಾ ಶೆಟ್ಟರ್ ಅವರ ಸರಹದ್ದುಗಳಿಲ್ಲದ ಭೂಮಿಯ ಕನಸು, ಸಹದೇವ ಯರಗೊಪ್ಪ ಅವರ ಬಿರಿದ ನೆಲದ ಧ್ಯಾನ, ಸೇರಿದಂತೆ ಕೃತಿಗಳನ್ನು 21 ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಪ್ರತಿ ವಿಭಾಗದಲ್ಲಿ ತಲಾ 5000 ರೂಪಾಯಿಯಂತೆ ನಗದು ಪುರಸ್ಕಾರ ನೀಡಲಾಗುತ್ತಿತ್ತು. ಈ ಬಾರಿ ಕಾದಂಬರಿ, ಕಥೆ, ಪ್ರವಾಸ, ಸಂಕೀರ್ಣ ಮತ್ತು ಸಂಶೋಧನೆ ವಿಭಾಗದಲ್ಲಿ ಪ್ರಶಸ್ತಿ ಮೊತ್ತವನ್ನು ಇಬ್ಬಿಬ್ಬರಿಗೆ ಹಂಚಿಕೆ ಮಾಡಲಾಗುತ್ತಿದೆ. ಜೊತೆಗೆ, ಕಾವ್ಯ ವಿಭಾಗದಲ್ಲಿ ಐವರು ಪ್ರಶಸ್ತಿಗೆ ಭಾಜನರಾಗಿದ್ದು, ಅದರಲ್ಲೂ ಐವರಿಗೆ ಹಂಚಿಕೆ ಮಾಡಲಾಗಿದೆ. ಪ್ರತಿ ವರ್ಷ 25 ಸಾವಿರ ರೂಪಾಯಿ ನಗದು ಪುರಸ್ಕಾರ ನೀಡುವುದನ್ನು ಈ ಬಾರಿ 30 ಸಾವಿರಕ್ಕೆ ಏರಿಸಲಾಗಿದೆ. ಹೀಗೆಂದು ಅವರು ಹೇಳಿದ್ದಾರೆ.

ಇದೇ ನವೆಂಬರ್ 26 ರಂದು ಸಂಜೆ 5.30 ಕ್ಕೆ ಸೇಡಂ ಪಟ್ಟಣದ ಶ್ರೀಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

ಪತ್ರಕರ್ತ ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ‘ಅಮ್ಮ ಪ್ರಶಸ್ತಿ’ಗೆ ಈಗ 21 ನೇ ವರ್ಷದ ಸಂಭ್ರಮವಾಗಿದೆ.

ಕನ್ನಡದ ಪ್ರತಿಭಾವಂತ ಬರಹಗಾರರು ‘ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ. ಅಲ್ಲದೇ ಗೌರವಿಸಿದ್ದಾರೆ. ಈ ಬಾರಿ 524 ಕೃತಿಗಳು ಬಂದಿದ್ದವು.

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ‘ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

 

ಅಮ್ಮ ಪ್ರಶಸ್ತಿ’ಗೆ 21 ನೇ ವರ್ಷದ ಸಂಭ್ರಮವೂ..!–

ಪತ್ರಕರ್ತ ಮತ್ತು ಲೇಖಕ ಮಹಿಪಾಲ ರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ‘ಅಮ್ಮ ಪ್ರಶಸ್ತಿ’ಗೆ ಈಗ 21 ನೇ ವರ್ಷದ ಸಂಭ್ರಮವಾಗಿದೆ.

ಕನ್ನಡದ ಪ್ರತಿಭಾವಂತ ಬರಹಗಾರರು ‘ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ `ಅಮ್ಮ ಪ್ರಶಸ್ತಿ’ಗೆ ಹಿರಿಯ ಲೇಖಕ ಡಾ.ಎಸ್.ಎಂ.ಹಿರೇಮಠ,  ಶಶಿಕಲಾ ವೀರಯ್ಯ ಸ್ವಾಮಿ, ಜಯಶ್ರೀ ಕಾಸರವಳ್ಳಿ, ರಜನಿ ನರಹಳ್ಳಿ ಹಾಗೂ ಮಹಾಂತಪ್ಪ ನಂದೂರ ಅವರ ಕೃತಿಗಳು ಆಯ್ಕೆಯಾಗಿವೆ. ಹೀಗೆಂದು `ಅಮ್ಮ ಪ್ರಶಸ್ತಿ’ ಸಂಸ್ಥಾಪಕ ಸಂಚಾಲಕ ಮಹಿಪಾಲ ರೆಡ್ಡಿ ಮುನ್ನೂರು ಹೇಳಿದ್ದಾರೆ. ನಾಡಿನ ಸಾಹಿತ್ಯ ವಲಯದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿದೆ..!

ಕೆ.ಶಿವು.ಲಕ್ಕಣ್ಣವರ

Don`t copy text!