ಮಂತ್ರಿ ನಿದ್ರೆಗೈದೊಡೆ

ಮಂತ್ರಿ ನಿದ್ರೆಗೈದೊಡೆ

ಮಂತ್ರಿ ನಿದ್ರೆಗೈದೊಡೆ
ದೇಶದ ಚಿಂತನೆ ಕಾಣಿರೋ
ಮಂತ್ರಿ ಎದ್ದು ಕುಳಿತರೆ
ಶಾಸನ ಸಭೆ ಕಾಣಿರೋ
ಮಂತ್ರಿಯ ಹೊಟ್ಟೆಯೇ
ಆಹಾರದ ಉಗ್ರಾಣ ಕಾಣಿರೋ
ಮಂತ್ರಿಯ ಕಿಸೆಯೇ
ರಿಸರ್ವ ಬ್ಯಾಂಕ್ ಕಾಣಿರೋ
ಮಂತ್ರಿಯ ನಡೆ
ಪ್ರಶ್ನಾತೀತ ಕಾಣಿರೋ
ಮಂತ್ರಿಯ ಹುಸಿ ಭರವಸೆ
ವೇದ ವಾಕ್ಯ ಕಾಣಿರೋ
ಮಂತ್ರಿಯ ಗ್ರಾಮೀಣ ವಾಸ
ವೈಕುಂಠ ಕಾಣಿರೋ
ರೈತರ ಪರ ಕಾಳಜಿ
ಮೊಸಳೆಯ ಕಣ್ಣೀರು ಕಾಣಿರೋ
ಇಂತಹ ನೀಚ ಮಂತ್ರಿಯ
ಮತ್ತೆ ಆಯ್ಕೆ ಮಾಡುವವನ
ಅಸಹಾಯಕ ಪ್ರಜೆ ಕಾಣಿರೋ
ಬಸವ ಪ್ರಿಯ ಶಶಿಕಾಂತ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!