ಕತ್ತಲು
ಕಪ್ಪುಮೋಡ ದಟ್ಟಗಟ್ಟಿ
ಕತ್ತಲಾವರಿಸಿದೆ ಈ
ಬೆಳಗು ಮುಂಜಾವಿನಲಿ…..!
ಧೋ..ಧೋ…ಎಂದು
ಸುರಿವಮಳೆ ಮತ್ತೇ
ಮುಂಗಾರು ನೆನಪಿಸಿದೆ….!
ಗುಡು ಗುಡು ಅಬ್ಬರಿಗುವ
ಗುಡುಗು ಮನದಿ
ಡುಗುಡ ಮೂಡಿಸಿದೆ…..!
ಕಾಲವಿದಾವುದಯ್ಯ ಮಾಸವಿದಾವುದಯ್ಯ
ಶಂಕ್ಯೆ ಕಾಡುತಿದೆ….!
ಈಗೀಗ ಮೈಗಳ್ಳನಾದ
ಸೂರ್ಯ ಬಾನಂಗಳಮರೆತು
ತಂಪಾಗುತ್ತಿದ್ದಾನೆ..!
ಮಳೆರಾಯ ದಯೆ ತೋರಿದನೆಂದ
ಹುರುಪಿಗೆ ಕಾಲಮರೆತು
ಸುರಿಯುತ್ತಿದ್ದಾನೆ….!
ತೆನೆಯೊಳಗಿನ ಕಾಳು
ಮೊಳಕೆಯೊಡೆದು ಭೂಮಿಯ
ಗರ್ಭ ಬಯಸಿದೆ….!
ನೇಗಿಲ ಯೋಗಿ
ಮತ್ತೆ ಆಕಾಶಕ್ಕೆ ಮುಖಮಾಡಿ
ಬೇಡಿಕೊಳ್ಳುತ್ತಿದ್ದಾನೆ….!
ಡಾ. ನಿರ್ಮಲ ಬಟ್ಟಲ