ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಗ್ರಾಪಂ ಸಮಸ್ಯೆ ಮುಕ್ತ ಮಾಡೋಣ-ಶಿವನಗೌಡ ನಾಯಕ

ಮಸ್ಕಿಯಲ್ಲಿ ಬಿಜೆಪಿ ಎಂಎಲ್ಸಿ ಚುನಾವಣೆ ಸಭೆ
ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಗ್ರಾಪಂ ಸಮಸ್ಯೆ ಮುಕ್ತ ಮಾಡೋಣ-ಶಿವನಗೌಡ ನಾಯಕ

e-ಸುದ್ದಿ ಮಸ್ಕಿ

ಗ್ರಾಪಂ ಸದಸ್ಯರಿಗೆ ಸ್ಥಳೀಯ ಮಟ್ಟದ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡದೇ ಇರುವುದರಿಂದ ಕ್ರಿಯಾ ಯೋಜನೆಗಳಿಗೆ ಸಕಾಲದಲ್ಲಿ ಅನುಮೋದನೆ ಸಿಗುತ್ತಿಲ್ಲ ಇದನ್ನು ನಿವಾರಿಸಲು ಬಿಜೆಪಿ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡಿ ಎಂದು ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ಹೇಳಿದರು.

ಪಟ್ಟಣದ ಬಸವೇಶ್ವರ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಯ ಸಭೆಯಲ್ಲಿ ಭಾನುವಾರ ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯತ್‌ನಲ್ಲಿ ಹಲವಾರು ಸಮಸ್ಯೆಗಳಿವೆ, ಅಲ್ಲದೇ ಸದಸ್ಯರು ಲಂಚ ಆರೋಪಗಳು ಸಹ ಹೇಳಿಕೊಂಡು ಇದರಿಂದ ಬೇಸತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ಸಮಸ್ಯೆ ಮುಕ್ತ ಗ್ರಾಪಂ ನಿರ್ಮಾಣ ಮಾಡೋಣ ಎಂದರು.

ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ ಮೋದಿಜಿಯವರು ಅಧಿಕಾರ ವಹಿಸಿಕೊಂಡ ನಂತರ ಸ್ಥಳೀಯ ಮಟ್ಟದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಸಿಎಂ ಅವರು ರಾಜ್ಯದಲ್ಲಿ ೫ ಲಕ್ಸ  ಆಶ್ರಯ ಮನೆಗಳನ್ನು ನೀಡುತ್ತಾರೆ ಎಂದರು. ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್‌ಗೌಡ ಪಾಟೀಲ್ ಅವರು ಶಾಶ್ವತವಾಗಿ ಉಳಿಯುವಂತಹ ಯೋಜನೆಗಳನ್ನು ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ಸ್ಪರ್ದಿಸಿರುವ ಅಭ್ಯರ್ಥಿ ಸಮಾಜ ಸೇವೆಗಾಗಿ ರಾಜಕೀಯ ಕ್ಷೆತ್ರಕ್ಕೆ ಬಂದಿರುವ ಸಭ್ಯ ಅಭ್ಯರ್ಥಿ ಆದ್ದರಿಂದ ನೀವು ಇವರನ್ನು ಆಯ್ಕೆ ಮಾಡಿ ಗ್ರಾಪಂಗಳು ಅಭಿವೃದ್ಧಿಯಾಗುತ್ತೆ ಮಸ್ಕಿ ಕ್ಷೆತ್ರದಿಂದ ಅತಿ ಹೆಚ್ಚು ಮತ ಕೊಟ್ಟು ಆಯ್ಕೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ವೀರುಪಾಕ್ಷಪ್ಪ ಹಾಗೂ ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ವಿಶ್ವನಾಥ್.ಎ.ಬನಹಟ್ಟಿ ಮಾತನಾಡಿದರು ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್ ತಿಪ್ಪರಾಜ್ ಹವಾಲ್ದಾರ್, ಅಮರೇಗೌಡ ವಿರುಪಾಪುರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಾನಂದ ಯಾದವ್, ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಳ್ಳಿ, ಅಪ್ಪಾಜಿ ಗೌಡ, ಮಹದೇವಪ್ಪ ಗೌಡ, ಮಲ್ಲಪ್ಪ ಅಂಕುಶದೊಡ್ಡಿ, ವಿಶ್ವನಾಥ ಪಾಟೀಲ್ ಸೇರಿದಂತೆ ಸಭೆಯಲ್ಲಿ ವಿವಿಧ ಗ್ರಾಪಂ ಸದಸ್ಯರು ಹಾಗೂ ಮುಖಂಡರು ಕಾರ್ಯಕರ್ತರು ಬಾಗವಹಿಸಿದ್ದರು.

Don`t copy text!