ಮರೆಯಾದಿರೆಲ್ಲಿ….?

ಮರೆಯಾದಿರೆಲ್ಲಿ….?

ವರುಷಗಳೇ ಕಳೆದಿವೆ
ನಮ್ಮೊಡೆಯ ಮರೆಯಾಗಿ
ಕಾದಿಹೆವು ಕಾತುರದಿ
ಬಂದೇ ಬರುವನೆಂದು..
ಸುಳಿಗಾಳಿ ಬೀಸಿ ಬರುತಿದೆ
ಪರದೆಗಳ ಮುತ್ತಿಕ್ಕಿ ;
ಮುಂಬೆಳಗಿನ ರವಿರಶ್ಮಿ
ಬೆಳಗಿಸಿದೆ ಕೋಣೆಯನು..
ಬಯಸಿದೆ ಸುಖಾಸೀನವು
ಒಡೆಯನ ಹಿತ ಸ್ಪರ್ಷವನು
ಉಪಹಾರದ ತಟ್ಟೆಯು
ಮುಖವಾಸದ ಹರಿವಾಣ
ಚಂದದ ಪೀಕದಾನಿಯು
ನೋಡುತಿವೆ ದಾರಿಯನು…
ಅದೆಷ್ಟೋ ರಾತ್ರಿಗಳು ಒಡೆಯ
ವಿರಮಿಸಿದ ಪರ್ಯಂಕದ
ಕುಸುರಿಗಳು ನಿಟ್ಟುಸಿರು ಹಾಕಿವೆ
ಬೇಡಿಕೊಳುವೆವು ನಾವು
ಬಂದ ನಿಮಗೆಲ್ಲ ನಮಿಸಿ
ನೋಡಿಹಿರಾ ನೀವಾದರೂ
ನಮ್ಮೊಡೆಯನನ್ನು…..?
ನಮ್ಮೊಲವಿನ ,
ನಮ್ಮ ಉಸಿರಾದ ,
ನಮ್ಮೊಡೆಯ, *ಮರೆಯಾದಿರೆಲ್ಲಿ …?

ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ 🙏

Don`t copy text!