ಗೌಡೂರು ಗ್ರಾಮ ಪಂಚಾಯಿತಿಯಲ್ಲಿ ವಾರ್ಡ್ ಸಭೆ

ಗೌಡೂರು ಗ್ರಾಮ ಪಂಚಾಯಿತಿಯಲ್ಲಿ ವಾರ್ಡ್ ಸಭೆ

e-ಸುದ್ದಿ ಲಿಂಗಸುಗೂರ

ತಾಲೂಕಿನ ಗೌಡೂರು ಗ್ರಾಮದ ದುರ್ಗಾ ದೇವಿ ದೇವಸ್ಥಾನ ಮುಂಭಾಗದಲ್ಲಿ ನಡೆದ 2021-22ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಗುಚ್ಛ ತಯಾರಿಸುವ ವಾರ್ಡ್ ಸಭೆ ಜರುಗಿತು.ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಯಿತು. ಸಭೆಯಲ್ಲಿ ಎರಡನೇಯ ವಾರ್ಡಿನ ಸಾರ್ವಜನಿಕರು ಕುಡಿಯುವ ನೀರಿನ ವಿಷಯವಾಗಿ ಪಿ.ಡಿ.ಒ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಪಿಡಿಒ ಸಾಹೆಬರೆ ನೀವೇ ಸರಿಯಾಗಿ ಗ್ರಾಮ ಪಂಚಾಯಿತಿ ಕಛೇರಿಗೆ ಬರುವುದಿಲ್ಲ ನಮ್ಮ ಸಮಸ್ಯೆಗಳನ್ನು ಯಾರ ಹತ್ತಿರ ಹೇಳಿಕೋಳ್ಳಬೇಕು . ಕುಡಿಯುವ ನೀರಿನಲ್ಲಿ ಹುಳುಗಳು ಬರುತ್ತಿವೆ ಎಂದು ಆರೋಪಿಸಿದರು. ಗ್ರಾಮದಲ್ಲಿ ಚರಂಡಿಗಳು ಹುಳು ತುಂಬಿ ಗೊಬ್ಬೆದ್ದು ನಾರುತ್ತಿದ್ದರು ಯಾವುದೇ. ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಂತಾಗಿದ್ದು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿ.ಡಿ.ಒ ಮೊಹಮ್ಮದ್ ಇಸಾಕ್, ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ರಮೇಶ್ ನಾಯಕ್,ಅಮರೇಶ ಬಡಿಗೆರ, ಕೃಷ್ಣ, ಹನುಮಂತ ಚಂದ್ರಶೆಖರ ಗ್ರಾಮದ ಮುಖಂಡರಾದ ರಾಚಯ್ಯ ಸ್ವಾಮಿ ಗಣಾಚಾರಿ,ತಿಮ್ಮನಗೌಡ ಪೋಲೀಸ್ ಪಾಟೀಲ್, ಸಿದ್ದಣ್ಣ ದಳಪತಿ, ಈರಪ್ಪ ದೊಡ್ಡಮನಿ,ಮೈನುದ್ದಿನ್,ಮುದಕಣ್ಣ ಸೇರಿದಂತೆ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

Don`t copy text!