ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ ಪ್ರಕರಣ, ಪುರಸಭೆ ಮುಂದೆ ಕಾಂಗ್ರೆಸ್ ಧರಣಿ
e-ಸುದ್ದಿ ಮಸ್ಕಿ
ಪಟ್ಟಣದ 19 ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರಸೀದಾಬೇಗಂ ನಾಮಪತ್ರ ತಿರಸ್ಕರಿಸಿದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪುರಸಭೆಯ ನೂತನ ಕಟ್ಟಡದ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
ಶಾಸಕ ಆರ್, ಬಸನಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ನೇತೃತ್ವದಲ್ಲಿ ಕಚೇರಿಗೆ ತೆರಳಿದ ಕಾಂಗ್ರೆಸ್ ನಿಯೋಗವು ಪಕ್ಷದ ‘ಬಿ’ ಪಾರಂ ಸಮೇತ ಸರಿಯಾದ ದಾಖಲೆ ಕೊಟ್ಟಿದ್ದರೂ ಸಹ ಯಾವ ಆಧಾರದ ಮೇಲೆ ನಾಮಪತ್ರ ತಿರಸ್ಕಾರ ಮಾಡಿದ್ದೀರಿ, ಏನು ತಪ್ಪಾಗಿದೆ ಎಂಬುದನ್ನು ನಮಗೆ ಲಿಖಿತವಾಗಿ ಕೊಡಬೇಕು ಎಂದು ಪಟ್ಟು ಹಿಡಿದು ಕುಳಿತರು.
ಈ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಯಾರೋದೋ ಒತ್ತಡಕ್ಕೆ ಮಣಿದು ನಾಮಪತ್ರ ತಿರಸ್ಕಾರ ಮಾಡಿದ್ದೀರಿ, ಕಾನೂನು ಗಾಳಿಗೆ ತೂರಿ ನಾಮಪತ್ರ ತಿರಸ್ಕಾರ ಮಾಡಿದ್ದೀರಿ ಎಂದು ಆರೋಪಿಸಿದರು. ಕೆಲ ಕಾಲ ಮಾತಿನ ಚಕಮಕಿಯೂ ನಡೆಯಿತು.
ಮಾಜಿ ಶಾಸಕ ಶಾಸಕ ಪ್ರತಾಪಗೌಡ ಪಾಟೀಲ ಒತ್ತಡಕ್ಕೆ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿ ರಾಷ್ಟೀಯ ಪಕ್ಷದ ಕಾರ್ಯಾಧ್ಯಕ್ಷ ಸಹಿಯನ್ನೇ ನಕಲಿ ಎಂದು ಹೇಳುತ್ತಿದ್ದಾರೆ ರಾಜ್ಯಾದ್ಯಂತ ಇದೆ ಬಿ ಫಾರಂ ಸ್ವಿಕೃತವಾಗಿವೆ ಆದರೆ ಮಸ್ಕಿಯಲ್ಲಿ ಮಾತ್ರ ಏಕೆ ಹೀಗೆ ಇಲ್ಲಿ ಯಾರ ಪ್ರಭಾವಕ್ಕೆ ಒಳಗಾಗಿದ್ದೀರಿ ಹಾಗೂ ಕಾಂಗ್ರೆಸ್ ಪಕ್ಷದ ಬಿ ಫಾರಂ ಬಿಜೆಪಿ ಪಕ್ಷದವರ ಬಳಿ ಹೇಗೆ ಬಂತು ಎಂದು ಪ್ರಶ್ನಿಸಿದರು. ಆದ್ದರಿಂದ ನಾವೂ ಇದನ್ನು ನ್ಯಾಯಲಯಕ್ಕೆ ಹೋಗಿ ಚುನಾವಣೆ ನಿಲ್ಲಿಸುವಂತೆ ಮನವಿ ಮಾಡುತ್ತೆವೆ ಎಂದು ತಿಳಿಸಿದರು .
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ,ಮುಖಂಡ ಸಿದ್ದಣ್ಣ ಹೂವಿನಭಾವಿ, ಎಚ್. ಬಿ. ಮುರಾರಿ, ಮಲ್ಲಯ್ಯ ಬಳ್ಳಾ, ಕೃಷ್ಣ ಡಿ. ಚಿಗರಿ ಸೇರಿದಂತೆ ಅನೇಕ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರುು ಇದ್ದರು.