ಮೆದಿಕಿನಾಳದಲ್ಲಿ ಸಾಧಕರಿಗೆ ‘ಸುವರ್ಣಗಿರಿ’ ಪ್ರಶಸ್ತಿ ಪ್ರಧಾನ ಡಿ. 25, 26 ರಂದು ಚೆನ್ನಮಲ್ಲ ಶಿವಯೋಗಿಗಳ ಜಾತ್ರಾ ಮಹೋತ್ಸವ

ಮೆದಿಕಿನಾಳದಲ್ಲಿ ಸಾಧಕರಿಗೆ ‘ಸುವರ್ಣಗಿರಿ’ ಪ್ರಶಸ್ತಿ ಪ್ರಧಾನ
ಡಿ. 25, 26 ರಂದು ಚೆನ್ನಮಲ್ಲ ಶಿವಯೋಗಿಗಳ ಜಾತ್ರಾ ಮಹೋತ್ಸವ

e-ಸುದ್ದಿ ಮಸ್ಕಿ

ಮಸ್ಕಿ: ಲಿಂ.ಚೆನ್ನಮಲ್ಲ ಶಿವಯೋಗಿಗಳವರ 66ನೇ ಜಾತ್ರಾ ಮಹೋತ್ಸವ ಹಾಗೂ ‘ಸುವರ್ಣಗಿರಿ’ ಪ್ರಶಸ್ತಿ ಪ್ರಧಾನ ಸಮಾರಾಂಭವನ್ನು ತಾಲ್ಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಡಿ. 25 ಹಾಗೂ 26 ರಂದು ನಡೆಯಲಿದೆ ಎಂದು ಸುವರ್ಣಗಿರಿ ಸಂಸ್ಥಾನ ಕನಕಗಿರಿ, ಮೆದಿಕಿನಾಳ ಮಠದ  ಪೀಠಾಧ್ಯಕ್ಷ ಡಾ. ಚೆನ್ನಮಲ್ಲ ಮಹಾಸ್ವಾಮೀಜಿ ತಿಳಿಸಿದರು.


ಪಟ್ಟಣದ ಗಚ್ಚಿನಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ‘ ಡಿ. 25 ರಂದು ಸಂಜೆ 6 ಗಂಟೆಗೆ ಧರ್ಮ ಸಭೆ ನಡೆಯಲಿದೆ. ಹಂಪಿ ವಿಶ್ವವಿದ್ಯಾಲಯದ ಕುಲಪತಿ ಸ,ಚಿ. ರಮೇಶ ಅವರಿಗೆ ‘ಸುವರ್ಣಗಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಕಾರ್ಯಕ್ರಮದಲ್ಲಿ ಬಾಗೆವಾಡಿಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಮಸ್ಕಿಯ ವರರುದ್ರಮುನಿ ಸ್ವಾಮೀಜಿ ಸೇರಿದಂತೆ ಹಲವಾರು ಮಠಾಧೀಶರು ಪಾಲ್ಗೊಳ್ಳುವರು, ಡಾಕ್ಟರೇಟ್ ಪದವಿ ಪಡೆದ ಕೆಂಪಯ್ಯ ಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಗಳಿಗೆ ಇದೇ ಸಂದರ್ಭದಲ್ಲಿ ಗೌರವ ಸಮರ್ಪಣೆ ಸಲ್ಲಿಸಲಾಗುವುದು ಎಂದರು.
ಡಿ. 26 ರಂದು ಸಂಜೆ 6  ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಚೆನ್ನವೀರ ಮಹಾಸ್ವಾಮಿಗಳು, ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಮ್ಮುಖದಲ್ಲಿ ಚಾಣುಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ನಿಂಗನಗೌಡ ಮ. ಬಿರದಾರ ಅವರಿಗೆ ‘ಸುವರ್ಣಗಿರಿ’ ಪ್ರಶಸ್ತಿ ನೀಡಲಾಗುವುದು. ಡಾಕ್ಟರೇಟ್ ಪದವಿ ಪಡೆದ ಡಾ. ಶಿವಬಸಯ್ಯ ಎಚ್. ಗಡ್ಡಿಮಠ, ಡಾ, ನಾರಾಯಣ ವೀರಪ್ಪ ಅಕ್ಕಸಾಲಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಕಳೆದ ಎರಡು ವರ್ಷಗಳಿಂದ ಕರೊನಾದಿಂದಾಗಿ ಸಾರ್ವಜನಿಕ ಕಾರ್ಯಕ್ರಮ ನಡೆಯದಿರುವ ಕಾರಣ ಈ ವರ್ಷ ಇಬ್ಬರು ಮಹನಿಯರಿಗೆ ಪ್ರಶಸ್ತಿ ವಿತರಿಸಲಾಗುತ್ತಿದೆ ಎಂದು ವಿವರಿಸದರು.
26 ರಂದು ಬೆಳಿಗ್ಗೆ ಚೆನ್ನಮಲ್ಲ ಶಿವಯೋಗಿಗಳ ಗದ್ದುಗೆಗೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುವವು. ಗಂಗಾಸ್ಥಳದಿಂದ ಕುಂಭ ಹಾಗೂ ಚೆನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ, ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಳ್ಳುವವು, ಸಂಜೆ ರಥೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಸೇರಿದಂತೆ ಇತರರು ಇದ್ದರು.

 

Don`t copy text!