ಸುವರ್ಣ ಸೌಧ

ಸುವರ್ಣ ಸೌಧ

ಕನ್ನಡದ ಹೆಮ್ಮೆ
ನಮ್ಮ ಬೆಳಗಾವಿ
ಕಿತ್ತೂರು ಚೆನ್ನಮ್ಮಳ
ವೀರನಾಡು
ಹಲವು ದಶಕದ
ಕನಸು ನನಸಾತು
ಕೊನೆಗೂ ಎದ್ದು ನಿಂತಿತು
ಹೆದ್ದಾರಿ ಹೆಗ್ಗೋಡೆ
ಕಟ್ಟಿದರು ಸುವರ್ಣ ಸೌಧ
ಹೊರಗಿನವರು ನಮ್ಮವರಿಗೆ
ಕಮಿಷನ್ ಕೊಟ್ಟು
ಐನೂರು ಕೋಟಿ
ಥೇಟ ಬೆಂಗಳೂರು
ವರ್ಷಕೊಮ್ಮೆ ಅಥವಾ
ಎರಡು ವರ್ಷಕೊಮ್ಮೆ
ಇಲ್ಲಿ ಚಳಿಗಾಲ ಅಧಿವೇಶನ
ರೈತರಿಗೆ ನ್ಯಾಯ ಸಿಕ್ಕಿಲ್ಲ
ಪೆನ್ಷನ್ ಹೋರಾಟ ನಿಂತಿಲ್ಲ
ಎಮ್ ಈ ಎಸ್ ಗದ್ದಲ
ಮಹಾಜನ ವರದಿ
ದಿಟ್ಟ ಕನ್ನಡಿಗರ ಪ್ರತಿಭಟನೆ
ಮೊಟ್ಟೆ ವಿರೋಧ ಚಳುವಳಿ
ಒಳಗೆ ಶಾಸಕರು ಮಲಗಿದ್ದಾರೆ
ಮಂತ್ರಿಗಳ ಸಮಯ ವ್ಯರ್ಥ
ಮತಾಂತರ ನಿಷೇಧ ಜಾರಿ
ಇಲ್ಲ ಬೆಂಬಲ ಬೆಲೆ
ಬೆಳೆದ ಬೆಳೆಗೆ ಬೆಂಕಿ
ಬೆಳಗಾವಿಯ ಗುಡ್ಡ
ಒಂದು ರಂಗಮಂದಿರ
ಬಣ್ಣ ಬಣ್ಣದ ಭಾಷಣ
ಸರಕಾರಿ ಖರ್ಚಿನಲಿ
ಮೋಜು ಮಸ್ತಿ
ಉತ್ತರ ಕರ್ನಾಟಕ ಅನಾಥ
ಬೆಂಕಿ ಬಿದ್ದಿದೆ ನಾಡಿಗೆ
ಚಳಿ ಕಾಯಿಸುವ ನೀಚರು
ನಮ್ಮನಾಳುವ ದೊರೆಗಳು
ಹಸಿದು ಬಿಕ್ಕಿ ಆಳುವ ಕಂದ
ಖಾದಿ ತೊಟ್ಟ ರಕ್ಕಸರಿಗೆ
ಬಿಸಿ ಬಿಸಿ ಕುಂದಾ
ಗ್ರಾಮ ರಾಜ್ಯದ ಕನಸು
ಬಾಪು ಸೌಧದಲಿ ಬಂಧ

ಡಾ ಶಶಿಕಾಂತ ಪಟ್ಟಣ ಪುಣೆ

Don`t copy text!