ನಲಿ-ಕಲಿ ಶ್ರಮ ಜೀವಿಗೆ ಸಂದ ಒಲವಿನ ಪ್ರಶಸ್ತಿಯ ಗರಿ…
ಶಾಲೆಯ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ತಮ್ಮನ್ನು ತನು, ಮನ, ಧನದಿಂದ ಅರ್ಪಿಸಿಕೊಂಡ ನಮ್ಮ ಹೆಮ್ಮೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಿಗ್ಗನಾಯಕನಭಾವಿಯ ಶ್ರಮ ಜೀವಿ ಶ್ರೀ ಪರಮಾನಂದ ಶಿಕ್ಷಕರಿಗೆ, ಗ್ರಾಮೀಣ ಶಾಲಾ ಶಿಕ್ಷಕರ ಸಂಘದಿಂದ ಕೊಡಮಾಡಲ್ಪಡುವ “ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ” ಒದಗಿ ಬಂದಿದೆ.
ಶಾಲಾ ಅವಧಿಯ ಹೊರತಾಗಿಯೂ ಸದಾ ಮಕ್ಕಳ ಕಲಿಕೆಗೆ ಪೂರಕವಾದ ತರಗತಿ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಚಿಂತಿಸಿ ಇಂದು ಅನೇಕ ಸೌಕರ್ಯಗಳನ್ನು ನಲಿ-ಕಲಿ ಮಕ್ಕಳಿಗೆ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರ ಈ ಕ್ರಿಯಾಶೀಲತೆಯಿಂದ ಶಾಲಾ ದಾಖಲಾತಿ ಮತ್ತು ಕಲಿಕೆಯಲ್ಲಿ ಗುಣಮಟ್ಟ ಹೆಚ್ಚಾಗಿದೆ. ಅಲ್ಲದೆ ಖಾಸಗೀ ಶಾಲೆಗೆ ತೆರಳುತ್ತಿದ್ದ ದಿಗ್ಗನಾಯಕನಭಾವಿ ಗ್ರಾಮದ ಮಕ್ಕಳನ್ನು ಪುನಃ ಸರಕಾರಿ ಶಾಲೆಗೆ ಪಾಲಕರು ಕರೆತಂದಿರುವುದು ಗಮನಿಸಬೇಕಾದ ಅಂಶವಾಗಿದೆ.
ಸದಾ ಕ್ರಿಯಾಶೀಲರಾಗಿರುವ ನಮ್ಮ ಪರಮಾನಂದ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಖುಷಿ ಎನಿಸುತ್ತಿದೆ. ಗ್ರಾಮೀಣ ಭಾಗದ ಇಂತಹ ಶ್ರಮ ಜೀವಿಗಳನ್ನು ಗುರುತಿಸಿರುವುದು ಸಂಘದ ಶ್ಲಾಘನೀಯ ಕಾರ್ಯವಾಗಿದೆ. ಮತ್ತು ಈ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಈ ಮೂಲಕ ಹೆಚ್ಚಿಸಿದೆ , ಮತ್ತಷ್ಟು ಕ್ರೀಯಾಶೀಲರಾಗಿ ಕಾರ್ಯೋನ್ಮುಖರಾಗಲು ಹುಮ್ಮಸ್ಸನ್ನು ನೀಡಿದೆ ಎಂದು ಶಾಲೆಯ ಮುಖ್ಯ ಗುರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರಾದ ಶ್ರೀ ಪರಮಾನಂದ ಅವರು, ಶಾಲೆಗಾಗಿ “ನಮ್ಮ ಯೋಜನೆ ನಿಮ್ಮ ಸಹಕಾರ“ದಡಿ ಸಹಕರಿಸಿದ, ಗ್ರಾಮಸ್ಥರಿಗೆ, ದೇಣಿಗೆದಾರರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ, ಈ ಗೌರವ ಎಲ್ಲವೂ ಅವರ ಸಹಕಾರದಿಂದ ಸಾಧ್ಯವಾಗಿದೆ.
Congratulations Paramanand sir