ಸುಗ್ಗಿಯ ಹಾಡು
ಸುಗ್ಗಿ ಬಂತೋ ಸುಗ್ಗಿ ಬಂತೋ
ಸುಗ್ಗಿ ಬಂತೋ ಽ ಽ ಽ ಽ ಽ
ಹಿಗ್ಗಿ ನಲಿವ ಹಾಡಿ ಕುಣಿವ
ಸುಗ್ಗಿ ಬಂತೋ ಽ ಽ ಽ ಽ ಽ
ಮುತ್ತಿನಂಥ ತೆನೆ ನೋಡಣ್ಣ
ಭರಭರ ಕೊಯ್ಯೋ ಬಾರಣ್ಣ
ಸರ ಸರ ಕೆಲಸ ಮಾಡಣ್ಣ
ಹೊತ್ತೇರಿ ಮ್ಯಾಲ ಬಂತಣ್ಣ..
ಹಂತಿಯ ಕಣವನು ಮಾಡ್ಯಾರಣ್ಣ
ಕಣದಾಗ ಮೇಟಿಯ ನೆಟ್ಟಾರಣ್ಣ
ತೆನೆಗಳ ಮುರಿಮುರಿದು ಹಾಕಣ್ಣ
ಎತ್ತಗೋಳ ಹೂಡಿ ತುಳಿಸಣ್ಣ..
ಗಾಳಿಗೆ ತೂರಿ ಹಾರಿಸಿ ಜೊಳ್ಳು
ಮ್ಯಾಲೇರಿ ಬಂತೋ ರಾಶಿಯ ಕಾಳು
ಎಡೆಯ ಮಾಡೋಣ ಭೂತಾಯಿಗೆ
ಆರುತಿ ಎತ್ತೋಣ ನೆಲದವ್ವಗೆ..
ವರುಷಕೊಮ್ಮೆ ಬರೋ ಫಸಲು
ರೈತರ ಬದುಕಿಗೆ ತಂದಿತೋ ಅಸಲು
ಭೂಮಿತಾಯಿಯು ಹರಸ್ಯಾಳೋ ನೋಡೋ
ಸಡಗರದ ಸುಗ್ಗಿ ಹಬ್ಬವ ನೋಡೋ..
–ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ