ನಮ್ಮ ಕುವೆಂಪು
ಕನ್ನಡದ ಪೆಂಪು
ಕಾವ್ಯಕ್ಕೆ ಕಂಪು
ಕೋಗಿಲೆಯ ಇಂಪು
ಸಾಹಿತ್ಯ ಸೊಂಪು
ಹೃನ್ಮನಕೆ ತಂಪು
ಆಗಿಹರು ಕುವೆಂಪು..ಹೃನ್ಮನಕೆ ತಂಪು.
ಹೆಸರೇನೋಪುಟ್ಟಪ್ಪ
ನಾಡಿಗೇ ದೊಡ್ಡಪ್ಪ
ರಾಷ್ಟ್ರ ಕವಿ ಇವರಪ್ಪ
ಯುಗದ ಕವಿ ನೋಡಪ್ಪ
ರಸ-ಋಷಿ ಕಾಣಪ್ಪ
ಹೌದಪ್ಪ ಅವರೇಕುವೆಂಪು..ಹೃನ್ಮನಕೆ ತಂಪು..
ಹಸುರಿನ ಒಡಲಲ್ಲಿ
ಪಕ್ಷಿಕಾಶಿಯ ನೋಡು
ಕಾನನದ ಕಂದರದಿ
ಹೆಗ್ಗಡ್ತಿಯ ಕಾಣು
ಮಲೆಯನೆತ್ತಿಯಮೇಲೆ
ಮದುಮಗಳು ನೋಡು..ಅಲ್ಲಿಹರು ಕುವೆಂಪು..
ದುಷ್ಟ ಗುಣ ಮರ್ದನಂ
ಶಿಷ್ಟ ಗುಣ ರಕ್ಷಣಂ
ಭಾವಗಳ ಸ್ಪಂದನಂ
ಆತ್ಮ ಸಾಕ್ಷಾತ್ಕಾರಮಂ
ನೀಡೆ ರಾಮಾಯಣ ದರ್ಶನಂ
ಪುಣ್ಯರೂಪಿಕುವೆಂಪು..ನೆನೆವ ಕ್ಷಣ ತಂಪು..
ವಾಗ್ದೇವಿ ಭಾಂಡಾರ
ರನ್ನ ಒಡೆದಿಹನಂತೆ
ಸರಸತಿಗೆ ಸಿಂಗಾರ
ಪಂಪ ಮಾಡಿದನಂತೆ
ಇಂದು ಕನ್ನಡ ನೆಲದಿ
ಶಾರದೆಯಪ್ರತಿರೂಪ ಕುವೆಂಪು
ವಿಶ್ವಮಾನವದೀಪ್ತಿ ಇವರಿಗೊಪ್ಪು..
–ಹಮೀದಾ ಬೇಗಂ ದೇಸಾಯಿ. ಸಂಕೇಶ್ವರ.