ವಿಜೃಂಭಣೆಯಿಂದ ಜರುಗಿದ ಶ್ರೀ ವೀರಭದ್ರೇಶ್ವರ ರಥೋತ್ಸವ
e-ಸುದ್ದಿ ಲಿಂಗಸುಗೂರು
ತಾಲೂಕಿನ ಗೌಡೂರು ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ರಥೋತ್ಸವ ವಿವಿಧ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.ಇಂದು ಮುಂಜಾನೆ ಶ್ರೀ ವೀರಭಧ್ರೇಶ್ವರ ದೇವರಿಗೆ ಮಹಾರುದ್ರಾಭಿಷೆಕ ಮಾಡಿ ಗಂಗಾ ಪೊಜೆಯೊಂದಿಗೆ ಕಳಸಾರೋಹಣ ಮಾಡಲಾಯಿತು.
ಸಂಜೆ ವೆಳೆಗೆ ಅಮರೇಶ್ವರ ಬೃಹನ್ಮಠದ ಶ್ರೀ ಗಜದಂಡ ಶಿವಾಚಾರ್ಯರ ಮಹಾಸ್ವಾಮಿಗಳು ರಾಥಾರೂಢರಾದ ಬಳಿಕ ತೆರನ್ನು ಎಳೆಯಲಾಯಿತು. ನೆರೆದಿದ್ದ ಅಪಾರ ಭಕ್ತ ಸಮೂಹ ಉತ್ತುತ್ತಿ, ಮಂಡಕ್ಕಿ, ಬಾಳೆಹಣ್ಣು ಎಸೆಯುವ ಮೂಲಕ ಅಪಾರ ಭಕ್ತಿ ಮೆರೆದರು.
ರಥ ಎಳೆಯುವ ಸಂದರ್ಭದಲ್ಲಿ ಬಣ್ಣ ಬಣ್ಣದ ಪಟಾಕಿಗಳನ್ನು ಆಕಾಶದೆತ್ತರಕ್ಕೆ ಹಾರಿಸಲಾಯಿತು.ಹಟ್ಟಿ ಪೋಲೀಸ್ ಠಾಣೆಯ ಪಿ.ಎಸ್.ಐ ರಾಮಲಿಂಗಪ್ಪ ಅವರ ನೆತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಗೌಡೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗಿಯಾಗಿ ರಥೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.