PSI ಆಗಿ ನೇಮಕಾತಿಯಾದ ಮಹಾಂತೇಶ ಬಡಿಗೇರ
e-ಸುದ್ದಿ ಲಿಂಗಸೂಗೂರು
PSI ಆಗಿ ಆಯ್ಕೆಯಾದ ಗೌಡೂರು ಗ್ರಾಮದ ಯವಕ ಮಹಾಂತೇಶ ಬಡಿಗೇರ ಪಿ.ಎಸ್. ಐ. ಆಗಿನೇಮಕಾತಿ ಹೊಂದಿದ ಹಿನ್ನಲೆಯಲ್ಲಿ ಅವರ ಸ್ನೆಹಿತರ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಸಿಹಿ ಹಂಚಲಾಯಿತು.
ಗೌಡೂರಿನಲ್ಲಿ ಜನಿಸಿದ ಮಹಾಂತೇಶ ಪ್ರಾಥಮಿಕ , ಪ್ರೌಢ ಶಿಕ್ಷಣ ಹುಟ್ಟೂರು ಗೌಡೂರಿನಲ್ಲಿ ಪೂರ್ಣ ಗೋಳಿಸಿದ್ದಾರೆ. ಪಿಯುಸಿ ಗುರುಗುಂಟಾ ಪದವಿ ಪೂರ್ವ ಕಾಲೇಜು ಬಾಹ್ಯ ಅಭ್ಯರ್ಥಿ ಡಿಗ್ರಿ ಲಿಂಗಸುಗೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಾಹ್ಯ ಅಭ್ಯರ್ಥಿ ಯಾಗಿ ತೆರ್ಗಡೆಹೊಂದಿದ್ದಾರೆ.
ಆರಂಭದ ಕೆಲ ದಿನಗಳು ಮುತ್ತುಟ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಕಡು ಬಡ ಕುಟುಂಬದಲ್ಲಿ ಜನಿಸಿದ ಇವರು 2014ರಲ್ಲಿ ಪೊಲೀಸ್ ಪೇದೆಯಾಗಿ ನೇಮಕಾತಿ ಹೊಂದಿದ್ದರು. ಬೆಳಗಾವಿ, ಮಂಗಳೂರು-ಬೆಂಗಳೂರು ತೋರಣಗಲ್ಲಿನಲ್ಲಿ ಹೀಗೆ ನಾನಾ ಭಾಗಗಳಲ್ಲಿ ಎಂಟು ವರ್ಷಗಳ ನಿರಂತರ ಸೇವೆ ಸಲ್ಲಿಸಿದ್ದಾರೆ..
ಛಲ ಬಿಡದೆ ಓದಿ 2021 ಅಕ್ಟೋಬರ್ ನಲ್ಲಿ ನಡೆದ ಪಿ.ಎಸ್.ಐ ಪರಿಕ್ಷೆ ಬರೆದಿದ್ದರು. ಪರೀಕ್ಷೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಎಂಟನೇ ರ್ಯಾಂಕ್ ಪಡೆದು ಇಡಿ ಗ್ರಾಮಕ್ಕೆ ಕಿರ್ತಿ ತಂದಿದ್ದಾರೆ.ಇವರ ಈ ಸಾಧನೆಗೆ ಅಪಾರ ಸ್ನೆಹಿತರ ಬಳಗ, ಗ್ರಾಮದ ಹಿರಿಯರು ಸಹೋದ್ಯೋಗಿಗಳು ಹರ್ಷೀತರಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಗ್ರಾಮೀಣ ಭಾಗದ ಯುವಕರು ಯಶಸ್ಸು ಗಳಿಸಲು ಪರಿಶ್ರಮ ಅಗತ್ಯವಾಗಿದ್ದು.ಬಡತನ ಯಾವುದಕ್ಕೂ ಅಡ್ಡಿ ಬರುವುದಿಲ್ಲ- -ಮಹಾಂತೇಶ ಬಡಿಗೇರ ಪಿ.ಎಸ್.ಐ ಹುದ್ದೆಗೆ ಆಯ್ಕೆಯಾದ ಯುವಕ