ಬೇಲಿಯ ಮೇಲಿನ
–
ಬೇಲಿಯ ಮೇಲಿನ
ಚಿಟ್ಟೆಗಳು
ಬಣ್ಣ ಬಣ್ಣದ
ಪಾತರಗಿತ್ತೆಗಳು
ಗಾಳಿ ಬಂದಾಗ
ತೂರಿಕೊಂಡು
ಹಾರಿಕೊಂಡು
ಬದುಕುತ್ತವೆ
ಒಣ ಆದರ್ಶ ಭಾಷಣ
ಲೇಖನ ಸಂವಾದ
ಬಿಸಿಲು ಬಂದ ಕಡೆಗೆ
ಕೊಡೆ ಹಿಡಿಯುತ್ತವೇ
ಎಡ ಬಲ ಕಿತ್ತಾಟ
ನಾಸ್ತಿಕ ಆಸ್ತಿಕ ಕಾದಾಟ
ಮಂದಿರ ಮಸಿದೆ
ವ್ಯರ್ಥ ಚರ್ಚೆಗೆ ಮುಂದಾಗುತ್ತವೆ
ಎತ್ತ ಹೆಚ್ಚು ಬಲ
ಅಲ್ಲಿ ಹಾರುತ್ತವೆ
ದೇಶ ನಾಡು ಭಾಷೆಗೆ
ಮತ್ತೆ ನಾವೇ
ಮೂಕ ಸಾಕ್ಷಿ
ನಮಗೆ ಭಯ
ಬದುಕಿನ ಬಗ್ಗೆ ಸಾವಿನ ಬಗ್ಗೆ
ಆಸೆ ಕನಸುಗಳಿಗೆ
ಮಾರು ಹೋಗುತ್ತವೆ
ಭಿಕ್ಷೆ ಎತ್ತುತ್ತವೆ
ಅವರ ಪ್ರಶಸ್ತಿ ಪುರಸ್ಕಾರಗಳಿಗೆ
ಜೋಳಿಗೆ ಒಡ್ಡುತ್ತವೆ
ಜೊಲ್ಲು ಸುರಿಸುತ್ತಾ
ಸಮಾಧಾನ ಪಟ್ಟುಕೊಳ್ಳುವ
ನರ ಸತ್ತವರ ಮಧ್ಯೆ
ಬದುಕ ಬೇಕಿದೆ.
ಬದುಕುತ್ತವೆ ನಮ್ಮ
ಬುದ್ಧಿ ಜೀವಿಗಳು
ಬೇಲಿಯ ಮೇಲಿನ
ಚಿಟ್ಟೆಗಳು
-ಡಾ ಶಶಿಕಾಂತ ಪಟ್ಟಣ ಪುಣೆ