ಮುದ್ದು ಮಗಳು
ಮಗಳೆಂದರೆ ಮುಗುಳ್ನಗು
ಮಗಳೆಂದರೆ ಜಗದ ನಗು
ಮಗಳು ಸಾಧನೆಯ ಶಿಖರ
ಮಗಳು ಸೂರ್ಯನಷ್ಟೇ ಪ್ರಖರ.
ಮಗಳು ಮಮತೆಯ ರೂಪ
ತಾಳ್ಮೆಯ ಪ್ರತಿರೂಪ
ಪ್ರೀತಿ ಸ್ನೇಹದ ಸಾಕಾರ ರೂಪ
ತವರ ಸಿರಿಯ ನಂದಾದೀಪ.
ಮಗಳು ಎಲ್ಲ ಅರಿತು ನಡೆಯುವಳು
ನೋವ ಮರೆತು ಬಾಳುವಳು
ಹೊಂದಾಣಿಕೆಯ ಹಂದರ ಅವಳು
ಬಾಳ ಬೆಳಗುವ ಮಂದಿರ.
ಚಂದಿರನಂತಹ ಚೆಲುವಿನವಳು
ಮನದಂಗಳದ ಬೆಳದಿಂಗಳು
ಜಗವ ಬೆಳಗ ಬಂದವಳು
ಎಲ್ಲರ ಮನೆಯ ಮುದ್ದಿನ ಮಗಳು.
–ಸವಿತಾ ಮಾಟೂರು ಇಲಕಲ್ಲ