ಗಝಲ್
ಗೆಳತಿ ನಿನ್ನ ಎದೆಗೂಡಿನಲಿ ಬಚ್ಚಿಟ್ಟ ಭಾವನೆ
ಸುಡುವುಧು ಕಾನನ ತನು ಮೆಲ್ಲಗೆ ಮೆಲ್ಲನೆ
ಸುರಿ ಸುರಿದು ಬಿಡು ಭಾವಗಳ ರಸ ಬುಗ್ಗೆ
ನಿದಿರೆ ಬಾರದೇ ಇರುಳು ದೂಡುವ ಪರಿಪಾಠ
ಅಡ್ಡಗೋಡೆಯ ಮೇಲೆ ಕಂದೀಲಿನ ಬೆಳಕು ಬೇಡ
ಹೊತ್ತಿ ಉರಿಯಲಿ ಬಾಳಿನ ಸೋಡರು ಬೆಳದಿಂಗಳ ಬೆಳಕು ಚೆಲ್ಲಿ
ನಿನ್ನ ಭೇಟಿಯಲಿ ನೀಹಾರಿಕೆಯಿಲ್ಲದೇ ದೂಡುತಿರುವೆ ದಿನ
ಸಂಶಯ ಮಾತು ಮನಕ್ಕೆ ಘಾಯ ವಾಸಿಯಾಗದ ರೋಗ
ಅಪ್ಪಿಕೊಂಡ ನಿನ್ನ ಭಾವ ಮಗುವಿನಂತೆ ಹಠ ಹುಚ್ಚು ಕಲ್ಪನೆ
ತೇಲುವ ತೆರೆಗಳನು ಹಿಡಿಯುವ ಬಯಕೆಯಲಿ ನೀನು
ಹೇಗೆ ಹೊತ್ತು ತರಲಿ ನಿನಗೆ ತಾರೆಗಳ ಸುಂದರ ಮಾಲೆ
ಕನಸು ಮನಸ್ಸಿನಲಿ ಸುಳಿದು ಬೀಸಿ ಬರುವ ತಂಗಾಳಿ ನೀನು
ಬಿಸಿಉಸಿರಿನ ದಾಹ ತೀರಿಸುವ ಕೆಸರೊಳಗಿನ ಕಮಲ ನೀನು
ಸೇರುವುದು ಪಾದ ಪೂಜೆಗೆ ನಿತ್ಯ ನಿನಗೆ ಅಭಿಷೇಕ
ನನ್ನ ಮನಭಾವದ ಮೃದುಹೃದಯಕೆ ಕಂಬನಿ ರುದ್ರಾಭಿಷೇಕ
ಮರೆತು ಹೋದ ಸವಿ ಮಾತಿಗೆ ಮೌನ ನಾನು ಬುದ್ಧ
ಮಂಗನ ಮನಸಿನ ಹುಚ್ಚು ಭಾವದಲಿ ಕುಣಿವ ಪೆದ್ದಿ ನೀನು
ಮಾತು ಕಠೋರದ ಮೃದು ಧೋರಣೆಯ ನಿತ್ಯ ಸ್ಪೂರ್ತಿ ಯ ಕುಲುಮೆ ನೀನು
ನಿತ್ಯ ಹೊಸತು ಬದುಕಿನಾಗಸದ ಪಚ್ಚೆ ಹಸಿರಿಗೆ ನಿತ್ಯ ಕಂಬನಿ ಉಸಿರು
-ಪ್ರೊ. ಸಾವಿತ್ರಿ ಕಮಲಾಪೂರ
ಪ್ರಾಚಾರ್ಯರು
ಸರಕಾರಿ ಪದವಿ ಪೂರ್ವ ಕಾಲೇಜು ಹಳ್ಳೂರ
ಮೂಡಲಗಿ